ದ.ಕ.ಜಿಲ್ಲೆ: ಕೋವಿಡ್ ಸೋಂಕಿನ 9 ಪ್ರಕರಣ ಪತ್ತೆ
![ದ.ಕ.ಜಿಲ್ಲೆ: ಕೋವಿಡ್ ಸೋಂಕಿನ 9 ಪ್ರಕರಣ ಪತ್ತೆ ದ.ಕ.ಜಿಲ್ಲೆ: ಕೋವಿಡ್ ಸೋಂಕಿನ 9 ಪ್ರಕರಣ ಪತ್ತೆ](https://www.varthabharati.in/sites/default/files/images/articles/2021/11/18/314271-1637245643.jpg)
ಮಂಗಳೂರು, ನ.18: ದ.ಕ.ಜಿಲ್ಲೆಯಲ್ಲಿ ಗುರುವಾರ ಕೋವಿಡ್ ಸೋಂಕಿನ 9 ಪಾಸಿಟಿವ್ ಪ್ರಕರಣದೊಂದಿಗೆ ಶೇ.0.18 ಪಾಸಿಟಿವ್ ದರ ದಾಖಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 21,91,066 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 20,75,360 ನೆಗೆಟವ್ ಮತ್ತು 1,15,706 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಗುರುವಾರ 20 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ 1,13,903 ಮಂದಿ ಬಿಡುಗಡೆಗೊಂಡಂತಾ ಗಿದೆ. ಈವರೆಗೆ 1694 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಸದ್ಯ 109 ಸಕ್ರಿಯ ಪ್ರಕರಣವಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 88,778 ಪ್ರಕರಣ ದಾಖಲಿಸಿ, 1,07,70,670 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story