ಹಂಸಲೇಖ ವಿರುದ್ಧ ಅಖಿಲ ಭಾರತ ಬ್ರಾಹ್ಮಣ ಸಮಾಜ ನೀಡಿದ್ದ ದೂರಿಗೆ ಪ್ರತಿದೂರು ದಾಖಲು

ಹಂಸಲೇಖ
ಬೆಂಗಳೂರು, ನ.18: ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ನಗರದ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದ ಅಖಿಲ ಭಾರತ ಬ್ರಾಹ್ಮಣ ಸಮಾಜದ ಉಪಾಧ್ಯಕ್ಷ ಕೃಷ್ಣರಾಜ್ ವಿರುದ್ಧ ದಲಿತ ಮುಖಂಡ ಶಿವರಾಜ್ ಅವರು ಪ್ರತಿ ದೂರು ಸಲ್ಲಿಸಿದ್ದಾರೆ.
ಪೇಜಾವರ ಶ್ರೀಗಳ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿದ್ದು ತಪ್ಪು. ಅದಕ್ಕಾಗಿ ಪೇಜಾವರ ಶ್ರೀಗಳ ಬೃಂದಾವನದ ಮುಂದೆ ಬಂದು ಹಂಸಲೇಖ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಕೃಷ್ಣರಾಜ್ ದೂರು ನೀಡಿದ್ದರು.
ಇದಕ್ಕೆ ಪ್ರತಿಯಾಗಿ ದಲಿತ ಮುಖಂಡ ಶಿವರಾಜ್ ಅವರು ಇಲ್ಲಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಕೃಷ್ಣರಾಜ್ ವಿರುದ್ಧ ದೂರು ನೀಡಿದ್ದು, ಕೃಷ್ಣರಾಜ್ ದೂರು ಕೋಮು ಗಲಭೆಗೆ ಕಾರಣ ಆಗಲಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
Next Story





