ಯುವಕ ನಾಪತ್ತೆ
ಮಂಗಳೂರು, ನ.18:ನಗರದ ಪಚ್ಚನಾಡಿಯ ಮಾತಾಶ್ರಯ ನಿಲಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಆಕಾಶ್ (20) ಎಂಬ ಯುವಕ ನ.17ರ ಬೆಳಗ್ಗೆ 10:30ರಿಂದ ಕಾಣೆಯಾಗಿದ್ದಾರೆ.
ಬೋಂದೆಲ್ ಜಂಕ್ಷನ್‌ಗೆ ತೆರಳಿ ಹಾಲು ಮತ್ತು ಮೊಸರು ತರುವುದಾಗಿ ಹೇಳಿ ಹೋದ ಈತ ಮರಳಿ ಬಂದಿಲ್ಲ ಎಂದು ಸಿಐಎಸ್‌ಎಫ್‌ನಲ್ಲಿ ಎಸ್ಸೈ ಆಗಿರುವ ಆಕಾಶ್‌ನ ತಂದೆ ಅಜಿತ್ ಎಂಬವರು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಆಕಾಶ್ ತೊದಲು ಮಾತುಗಳನ್ನಾಡುತ್ತಿದ್ದು, ಕಳೆದ ಎರಡು ವರ್ಷದಿಂದ ಮನೆಯಲ್ಲೇ ಇದ್ದ ಎನ್ನಲಾಗಿದೆ. 165 ಸೆಂ.ಮಿ ಎತ್ತರವಿರುವ, ಎಣ್ಣೆಗಪ್ಪುಮೈಬಣ್ಣದ ಈತನನ್ನು ಕಂಡವರು ಮಾಹಿತಿ ನೀಡುವಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Next Story





