ಮಗು ಸಹಿತ ತಾಯಿ ನಾಪತ್ತೆ
ಮಂಗಳೂರು, ನ.18: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಸ್ಲೀಮಾ (30)ಎಂಬಾಕೆಯು 2 ವರ್ಷ ಪ್ರಾಯದ ಸಾರಾ ಎಂಬ ಮಗು ಸಹಿತ ನ.16ರಿಂದ ಕಾಣೆಯಾಗಿದ್ದಾರೆ.
ಮಂಗಳೂರಿನ ಕಾರ್ಮೆಲ್ ಶಾಲೆಯಲ್ಲಿ ಮೀಟಿಂಗ್ ಇದೆ ಎಂದು ಮನೆಯಿಂದ ಹೊರಟು ಬಂದಿದ್ದ ಈಕೆ ಶಾಲೆಗೂ ಹೋಗದೆ, ಮನೆಗೂ ಮರಳದೆ ಕಾಣೆಯಾಗಿದ್ದಾರೆ. ಆಕೆಯ ಪತಿ ಸಂಶೀರ್ ಸಹಿತ ಮನೆ ಮಂದಿ ಹುಡುಕಾಡಿದರೂ ಈವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದೆ. ತಸ್ಲೀಮಾಳ ಸಹೋದರ ಅಲ್ತಾಫ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





