ಜಿಲ್ಲಾಸ್ಪತ್ರೆಯ ಹೊರಗಡೆ ಮಗುವಿನ ಮೃತದೇಹ ನಾಯಿಪಾಲು: 2 ವರ್ಷಗಳಲ್ಲಿ ಎರಡನೇ ಘಟನೆ

ಭೋಪಾಲ್: ಮಧ್ಯಪ್ರದೇಶದ ಅಶೋಕನಗರದ ಜಿಲ್ಲಾ ಆಸ್ಪತ್ರೆಯ ಹೊರಗೆ ನಾಯಿಯೊಂದು ಮಗುವಿನ ಮೃತ ದೇಹವನ್ನು ತಿನ್ನುತ್ತಿದ್ದ ಆಘಾತಕಾರಿ ದೃಶ್ಯ ಕಂಡುಬಂದಿದೆ. ಈ ಘಟನೆಯ ಕುರಿತು ಆಸ್ಪತ್ರೆಯು ತನಿಖೆಗೆ ಆದೇಶಿಸಿದೆ. ನಾಯಿಯೊಂದು ನವಜಾತ ಶಿಶುವಿನ ಶವವನ್ನು ತಿನ್ನುತ್ತಿರುವುದನ್ನು ನೋಡಿದ ಸ್ವಚ್ಛತಾ ಕಾರ್ಮಿಕರು ಅದನ್ನು ಓಡಿಸಿದ್ದಾರೆ.
“ಬೆಳಿಗ್ಗೆ ನಮಗೆ ಮಾಹಿತಿ ಸಿಕ್ಕಿತು. ಇದೀಗ ಮಗುವಿನ ಮೃತದೇಹವನ್ನು ಶವಾಗಾರದಲ್ಲಿ ಸುರಕ್ಷಿತವಾಗಿಟ್ಟಿದ್ದೇವೆ. ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಈ ಹಿಂದಿನ ಪ್ರಕರಣಗಳಲ್ಲಿ ಕುಟುಂಬ ಸದಸ್ಯರು ನವಜಾತ ಶಿಶುವಿನ ಮೃತದೇಹಗಳನ್ನು ಸರಿಯಾಗಿ ಹೂಳದೇ ಇರುವುದನ್ನು ನಾವು ನೋಡಿದ್ದೇವೆ. ಕೆಲವರು ಮಗುವಿನ ಶವವನ್ನು ಎಸೆಯುತ್ತಾರೆ'' ಎಂದು ಅಶೋಕನಗರ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ.ಡಿ.ಕೆ.ಭಾರ್ಗವ ಎನ್‌ಡಿಟಿವಿಗೆ ತಿಳಿಸಿದರು.
ಕಳೆದ ವರ್ಷ ಆಗಸ್ಟ್‌ನಲ್ಲಿ ಕೂಡ ಇದೇ ಆಸ್ಪತ್ರೆಯ ಹೊರಗೆ ಇದೇ ರೀತಿಯ ಘಟನೆ ಸಂಭವಿಸಿದ್ದು, ಬೀದಿ ನಾಯಿಗಳು ನವಜಾತ ಶಿಶುವಿನ ದೇಹವನ್ನು ತಿನ್ನುತ್ತಿರುವುದು ಕಂಡುಬಂದಿದೆ.
ಕಳೆದ ಎರಡು ವರ್ಷಗಳಲ್ಲಿ ಇದು ನಾಲ್ಕನೇ ಘಟನೆಯಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.