ಜಿಲ್ಲಾಧಿಕಾರಿ ಕೂರ್ಮಾ ರಾವ್ ಕಾರ್ಕಳ ಭೇಟಿ; ತಾಲೂಕು ಕಚೇರಿ, ಪುರಸಭೆಯಲ್ಲಿ ಕಡತ ಪರಿಶೀಲನೆ

ಕಾರ್ಕಳ : ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ನ. 18ರಂದು ಕಾರ್ಕಳ ತಾಲೂಕು ಕಚೇರಿ ಹಾಗೂ ಪುರಸಭೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದರು.
ತಾಲೂಕು ಕಚೇರಿಯಿಂದ ಕೋಟಿ ಚೆನ್ನಯ ಥೀಮ್ ಪಾರ್ಕ್, ಸ್ವರಾಜ್ ಮೈದಾನಕ್ಕೆ ಭೇಟಿ ನೀಡಿದರು. ಬಳಿಕ ಗೋಮಟೇಶ್ವರ ಬೆಟ್ಟ ದರ್ಶನ ಪಡೆದರು. ಬಳಿಕ ಪುರಸಭೆಗೆ ಆಗಮಿಸಿ, ಕಡತ ವಿಲೇವಾರಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ಪುರಂದರ, ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ, ಕಂದಾಯ ಅಧಿಕಾರಿ ಸಂತೋಷ್ ಕುಮಾರ್, ಹಿರಿಯ ಆರೋಗ್ಯ ಅಧಿಕಾರಿ ಲೈಲಾ ತೋಮಸ್, ಉಪ ತಹಶಿಲ್ದಾರ್ ಮಹೇಶ್ ಕುಮಾರ್, ತಾಲೂಕು ಕಂದಾಯ ಅಧಿಕಾರಿ ಶಿವಪ್ರಸಾದ್ , ಗ್ರಾಮ ಕರಣಿಕ ರಿಯಾಝ್ ಉಪಸ್ಥಿತರಿದ್ದರು.










