ಬೆಂಗಳೂರು: ನಕಲಿ ಛಾಪಾ ಕಾಗದ ತಯಾರಿ ಜಾಲ ಪತ್ತೆ: ಐವರ ಬಂಧನ
63.57 ಲಕ್ಷ ರೂ. ಮೌಲ್ಯದ ಛಾಪಾ ಕಾಗದ ವಶಕ್ಕೆ

ಬೆಂಗಳೂರು, ನ.19: ನಕಲಿ ಛಾಪಾ ಕಾಗದಗಳನ್ನು ತಯಾರಿಸಿ ಎಂಬೋಜಿಂಗ್/ಪ್ರಾಕಿಂಗ್ ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಜಾಲವೊಂದನ್ನು ನಗರದ ಗೋವಿಂದಪುರ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಓರ್ವೆ ಮಹಿಳೆ ಸಹಿತ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ತನ್ನ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಪೊಲೀಸ್ ಆಯುಕ್ತರು, 63,57,522.25 ರೂ. ಮೌಲ್ಯದ ನಕಲಿ ಛಾಪಾ ಕಾಗದಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಬೆಂಗಳೂರು, ಕಾಟನ್ ಪೇಟೆ ಬ್ರಾಂಚ್ ಎಂಬ ಹೆಸರಿನ ಸೀಲ್ ಸಹಿತ ಹಲವು ಸೀಲ್ ಗಳು, ಪ್ರಿಂಟಿಂಗ್ ಮೆಶಿನ್, ಇತ್ಯಾದಿ ಸಹಿತ ಹಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Next Story





