ಮಂಜನಾಡಿ: ಪದ್ಮಶ್ರೀ ಹಾಜಬ್ಬರಿಗೆ ಯುವ ಕಾಂಗ್ರೆಸ್ ನಿಂದ ಸನ್ಮಾನ

ಮಂಗಳೂರು, ನ.19: ಮಂಜನಾಡಿ ಗ್ರಾಮ ಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ಉರುಮಣೆಯಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಶಾಸಕ ಯು.ಟಿ.ಖಾದರ್ ಹಾಜಬ್ಬರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಜಬ್ಬ, ಸನ್ಮಾನ ಕ್ಕಾಗಿ ನಾನು ಕೆಲಸ ಮಾಡಿಲ್ಲ. ನಮ್ಮೂರ ಲ್ಲಿ ಶಿಕ್ಷಣ ವ್ಯವಸ್ಥೆ ಬೇಕು ಎಂಬ ಗುರಿ ಇತ್ತು. ಇದಕ್ಕೆ ಮಂಜನಾಡಿ ಗ್ರಾಮದ ಜನರು ಕೂಡ ಸಹಕಾರ ಮಾಡಿದ್ದಾರೆ ಎಂದರು
ಮಂಜನಾಡಿ ಗ್ರಾಪಂ ಉಪಾಧ್ಯಕ್ಷ ವಿನ್ಸೆಂಟ್ ವೇಗಸ್, ಸದಸ್ಯ ಬಾವು ಮಾರಾಠಿಮೂಲೆ, ಕಾಂಗ್ರೆಸ್ ಮುಖಂಡರಾದ ಎನ್.ಎಸ್.ಕರೀಂ, ಸದಾಶಿವ ಉಳ್ಳಾಲ್, ಫಿರೋಝ್ ಮಲಾರ್, ನಾಸಿರ್ ಸಾಮಾಣಿಗೆ, ಲಿಲ್ಲಿ ಫೆರ್ನಾಂಡಿಸ್, ಚಂದ್ರಿಕಾ ರೈ, ಮೂಸಾ ಸಫರ್, ಹಮೀದ್ ಮದ್ಪಾಡಿ ಅಶೀರುದ್ದೀನ್ ಸಾರ್ತಬೈಲ್, ಆ್ಯಂಟೋನಿ ಮಸ್ಕರೇನ್ಹಸ್, ಅಶ್ರಫ್ ಸಫಾ, ಮುಸ್ತಫ, ನಾಸಿರ್ ಮೈಸೂರು, ನಝೀರ್ ಮದ್ಪಾಡಿ, ನಿಝಾರ್, ಆಸಿಫ್, ಸಫ್ವಾನ್ ಮಂಗಳ ನಗರ, ಎಂ.ಎಚ್.ಅಯ್ಯೂಬ್ ಮುಂಬೈ ಬಾವು, ಇಸ್ಮಾಯೀಲ್ ಸಾಯಿಬಾಕ ಮತ್ತಿತರರು ಉಪಸ್ಥಿತರಿದ್ದರು.






