ಪ್ರಜಾಪ್ರಭುತ್ವಕ್ಕೆ ಸಂದ ಜಯ: ಅಶೋಕ್ ಕುಮಾರ್ ಕೊಡವೂರು
ಉಡುಪಿ, ನ.19: ಕೇಂದ್ರ ಸರಕಾರ ಕಳೆದ ವರ್ಷ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದ, ವಿವಾದಾತ್ಮಕ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ. ಕಾಂಗ್ರೆಸ್ ಇದನ್ನು ಸ್ವಾಗತಿಸುತ್ತದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಆದರೆ ಇದು ಪ್ರಧಾನಿ ಮೋದಿ ಸರಕಾರದ ರೈತರ ಕಣ್ಣೊರಸುವ ರಾಜಕೀಯ ತಂತ್ರವಾಗಬಾರದು. ಈಗಾಗಲೇ ರಾಷಟ್ರೆಪತಿಗಳ ಅಂಕಿತ ದೊಂದಿಗೆ ಜಾರಿಗೆ ಬಂದ ಈ ಕಾನೂನನ್ನು ಮುಂದಿನ ಲೋಕಸಭಾ ಅಧಿವೇಶನದಲ್ಲಿ ಸಾಂವಿಧಾನಿಕ ಮಾನ್ಯತೆಯೊಂದಿಗೆ ಅಧಿಕೃತವಾಗಿ ರದ್ದುಗೊಳಿಸಬೇಕು. ಸರಕಾರ ಈ ಆಶ್ವಾಸನೆ ಯನ್ನು ಜನರಿಗೆ ನೀಡಬೇಕು. ಇಲ್ಲವಾದಲ್ಲಿ ಮತ್ತೆ ರೈತ ಹೋರಾಟದ ಕಿಚ್ಚು ಭುಗಿಲೇಳುವುದು ಅನಿವಾರ್ಯವಾದೀು ಎಂದು ಕಾಂಗ್ರೆಸ್ ಹೇಳಿಕೆ ತಿಳಿಸಿದೆ.
ಕಳೆದ ಒಂದು ವಷರ್ದಿಂದ ನಿರಂತರವಾಗಿ ನಡೆದ ಹೋರಾಟದಲ್ಲಿ ಸುಮಾರು 700ಕ್ಕೂ ಹೆಚ್ಚು ರೈತರು ಅಸುನೀಗಿದ್ದು ಇವರ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಪ್ರತಿಭಟನೆಯನ್ನು ಹತ್ತಿಕ್ಕಲು ಹುನ್ನಾರ ನಡೆಸಿ ರೈತ ಕುಟುಂಬಗಳ ಕಷ್ಟ ನಷ್ಟಗಳಿಗೆ ಕಾರಣರಾದವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಬೇಕು. ಇದರೊಂದಿಗೆ ಈಗಾಲೇ ಜಾರಿಗೆ ತಂದಿರುವ ವಿದ್ಯುತ್ ಮಸೂದೆಯನ್ನು ರೈತರ ಹಿತದೃಷ್ಟಿ ಯಿಂದ ಹಿಂದೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.







