ಅನುಮಾನಾಸ್ಪದ ತಿರುಗಾಟ: ಇಬ್ಬರ ಬಂಧನ
ಮಂಗಳೂರು, ನ.19: ನಗರದ ಬಲ್ಮಠದ ಆರ್ಯ ಸಮಾಜ ರಸ್ತೆಯಲ್ಲಿರುವ ಗೂಡಂಗಡಿ ಬಳಿ ಅನುಮಾನಾಸ್ಪವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಕದ್ರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಲತಃ ಪಶ್ಚಿಮ ಬಂಗಾಲದ ಕೊಟಕಿಯ ಪ್ರಸ್ತುತ ಬಲ್ಮಠ ನಿವಾಸಿ ಸುಬೋಲ್ ಸಿಂಗ್ (21), ಹಾಗೂ ಪಶ್ಚಿಮ ಬಂಗಾಲದ ಲವಡೊಂಗರಿಯ ಪ್ರಸ್ತುತ ವಾಮಂಜೂರು ನಿವಾಸಿ ದಿಲೀಪ್ ಸಿಂಗ್ (21) ಬಂಧಿತ ಆರೋಪಿಗಳು.
ಕದ್ರಿ ಪೊಲೀಸರು ನ.19ರಂದು ಬೆಳಗ್ಗಿನ ಜಾವ ಗಸ್ತು ತಿರುಗುತ್ತಿದ್ದಾಗ ಆರೋಪಿಗಳು ಪೊಲೀಸರನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಕೂಡಲೇ ಸಿಬ್ಬಂದಿ ಹಿಡಿದು ವಿಚಾರಣೆ ನಡೆಸಿದಾಗ ಸಮರ್ಪಕವಾದ ಉತ್ತರ ನೀಡಲಿಲ್ಲ. ಇದರಿಂದ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





