ದ್ವಿತೀಯ ಟ್ವೆಂಟಿ-20: ಭಾರತದ ಗೆಲುವಿಗೆ 154 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್
ಮೊದಲ ಪಂದ್ಯದಲ್ಲೇ ಮಿಂಚಿದ ಹರ್ಷಲ್ ಪಟೇಲ್

ರಾಂಚಿ, ನ.19: ಚೊಚ್ಚಲ ಪಂದ್ಯವನ್ನಾಡಿದ ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್(2-25)ನೇತೃತ್ವದ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ತಂಡ ದ್ವಿತೀಯ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲುವಿಗೆ 154 ರನ್ ಗುರಿ ನೀಡಿದೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಝಿಲ್ಯಾಂಡ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿತು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್(34, 21 ಎಸೆತ)ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಮಾರ್ಟಿನ್ ಗಪ್ಟಿಲ್(31) ಹಾಗೂ ಮಿಚೆಲ್(31)ಮೊದಲ ವಿಕೆಟ್‌ಗೆ 48 ರನ್ ಜೊತೆಯಾಟ ನಡೆಸಿದರು. ಮಾರ್ಕ್ ಚಾಪ್‌ಮನ್ 21 ರನ್, ಟಿಮ್ ಸೆಫರ್ಟ್ 13 ರನ್ ಗಳಿಸಿದ್ದಾರೆ.
ಭಾರತದ ಪರವಾಗಿ ಪಟೇಲ್ ಯಶಸ್ವಿ ಬೌಲರ್ ಎನಿಸಿಕೊಂಡರು. ರವಿಚಂದ್ರನ್ ಅಶ್ವಿನ್(1-19), ಅಕ್ಷರ್ ಪಟೇಲ್(1-26), ಭುವನೇಶ್ವರ ಕುಮಾರ್(1-39) ಹಾಗೂ ದೀಪಕ್ ಚಹಾರ್(1-42) ತಲಾ 1 ವಿಕೆಟ್‌ಗಳನ್ನು ಪಡೆದರು. ಈ ಪಂದ್ಯವನ್ನು ಗೆದ್ದುಕೊಂಡರೆ ರೋಹಿತ್ ಶರ್ಮಾ ಬಳಗ ಸರಣಿಯನ್ನು 2-0 ಅಂತರದಿಂದ ಕೈವಶ ಮಾಡಿಕೊಳ್ಳಲಿದೆ.