ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯ: ಡಿ.ವಿ.ಸದಾನಂದ ಗೌಡ
ದ.ಕ. ಬಿಜೆಪಿ ಜನಸ್ವರಾಜ್ ಸಮಾವೇಶ

ಮಂಗಳೂರು : ಮುಂಬರುವ 25 ಸ್ಥಾನಗಳಿಗೆ ನಡೆಯುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕರ್ನಾಟಕ ವಿಧಾನ ಪರಿಷತ್ ನಲ್ಲಿ ಗರಿಷ್ಠ ಸಂಖ್ಯಾಬಲವನ್ನು ಹೊಂದಲಿದೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಬಿಜೆಪಿ ವತಿಯಿಂದ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿಂದು ಹಮ್ಮಿಕೊಂಡ ಜನಸ್ವರಾಜ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಯಾವುದೇ ಮಸೂದೆ ಅಂಗೀಕಾರವಾಗಬೇಕಾದರೆ. ಎರಡೂ ಸದನಗಳಲ್ಲಿ ಪಕ್ಷದ ಸಂಖ್ಯಾಬಲ ಮುಖ್ಯವಾ ಗುತ್ತದೆ. ಇತ್ತೀಚೆಗೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆಗೆ ವಿಧಾನ ಸಭೆಯಲ್ಲಿ ಬಹುಮತ ದೊರೆತರೂ ವಿಧಾನ ಪರಿಷತ್ ನಲ್ಲಿ ಬೆಂಬಲ ಪಡೆಯಲು ಸಾಧ್ಯವಾಗಲಿಲ್ಲ. ಬಿಜೆಪಿ ಪಕ್ಷದ ಸದಸ್ಯರ ಸಂಖ್ಯಾಬಲ (29)ಕಡಿಮೆ ಇದ್ದ ಕಾರಣ ವಿಧಾನ ಪರಿಷತ್ ನಲ್ಲಿ ಈ ಮಸೂದೆ ಬಿದ್ದು ಹೋಯಿತು. ಆದರೆ ಈ ಬಾರಿ ನಡೆಯುವ ಸ್ಥಳೀಯಾಡಳಿತದ 25 ಕ್ಷೇತ್ರಗಳ ಚುನಾವಣೆ ಯಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಪಡೆದು ವಿಧಾನ ಪರಿಷತ್ ನಲ್ಲೂ ಬಿಜೆಪಿ ಗರಿಷ್ಠ ಸಂಖ್ಯಾಬಲ ಹೊಂದಲಿದೆ ಎಂದು ಡಿ.ವಿ. ಸದಾ ನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ರಂಗದ ಮೂಲ ಸೌಕರ್ಯ ಅಭಿವೃದ್ಧಿ ಗೆ ಒಂದು ಲಕ್ಷ ಕೋಟಿ ರೂ ಅನುದಾನ:- ಕೃಷಿ ರಂಗದ ಮೂಲ ಸೌಕರ್ಯ ಅಭಿವೃದ್ಧಿ ಗೆ ಒಂದು ಲಕ್ಷ ಕೋಟಿ ರೂ ಅನುದಾನವನ್ನು ಕೇಂದ್ರ ಸರಕಾರ ಮೀಸಲಿಟ್ಟಿದೆ.ಜೊತೆಗೆ ಕೃಷಿ ಆಧಾರಿತ ಉದ್ಯಮ ರಂಗದ ಅಭಿವೃದ್ಧಿ ಗೆ ಸರಕಾರ ಸಾಕಷ್ಟು ಅನುದಾನ ನೀಡುತ್ತಾ ಬಂದಿದೆ.ಇದರಿಂದ ಸರಕಾರ ರೈತರ ಪರವಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಭಾರತ ಕೃಷಿ ಉತ್ಪನ್ನ ರಫ್ತು ಉದ್ಯಮ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಒಂಭತ್ತನೆ ಸ್ಥಾನದಲ್ಲಿದೆ.ದೇಶದ ಜಿಡಿಪಿಗೆ ಕೃಷಿ ಕ್ಷೇತ್ರದ ಮೂಲಕ ಶೇ 20.22. ಕೊಡುಗೆ ದೊರೆಯುತ್ತಿದೆ.ದೇಶದ ಪ್ರಧಾನ ಮಂತ್ರಿ ಯವರು ಕೃಷಿ ಆಧಾರಿತ ಉದ್ಯಮ ರಂಗದ ಬೆಳವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿದ್ದಾರೆ. ಆ ಕಾರಣದಿಂದ ಕೃಷಿ ಉತ್ಪನ್ನ ಗಳ ಸಂಗ್ರಹಣೆಗೆ ಗೋದಾಮು ನಿರ್ಮಾಣ,ಸಂಸ್ಕರಣಾ ಘಟಕಗಳ ನಿರ್ಮಾಣಕ್ಕೆ ಸರಕಾರ ನೆರವು ನೀಡುತ್ತಿದೆ. ಗ್ರಾಮೀಣ ಜನರ ಆರೋಗ್ಯ ಕ್ಕಾಗಿ ಆಯು ಷ್ಮಾನ್ ಭಾರತ್ ಯೋಜನೆಅಂತಿಮವಾಗಿ ಗ್ರಾಮ ಪಂಚಾಯತ್ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಸರಕಾರ ಶ್ರಮಿಸುತ್ತಿದೆ.ದಕ್ಷಿಣ ಭಾರತದಲ್ಲಿ ಬಿಜೆಪಿಯ ಪ್ರಾಬಲ್ಯದ ವಿಸ್ತರಣೆಯ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ವಿಧಾನ ಪರಿಷತ್ ನ 25 ಸ್ಥಾನಗಳ ಚುನಾವಣೆ ಮಹತ್ವ ಪಡೆದಿದೆ.ಹಾಲಿ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀ ನಿವಾಸ ಪೂಜಾರಿ ಮರು ಆಯ್ಕೆ ಖಚಿತ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸಿದ್ದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡುತ್ತಾ, ಸಹಕಾರ ಸಚಿವನಾಗಿ ರಾಜ್ಯದ ಸಹಕಾರಿ ಬ್ಯಾಂಕ್ ಗಳ ಮೂಲಕ ಸುಮಾರು 30 ಲಕ್ಷ ರೈತರಿಗೆ ಸಾಲ ನೀಡುವ ಗುರಿಯನ್ನು ಹೊಂದಿದೆ.ಸಹಕಾರಿ ಬ್ಯಾಂಕ್ ನಲ್ಲಿ ಯಾವುದೇ ಅವ್ಯವಹಾರ ನಡೆದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದ.ಕ ಜಿಲ್ಲೆಯ ಡಿಸಿಸಿ ಬ್ಯಾಂಕನ್ನು ಉಡುಪಿ ಜಿಲ್ಲೆಯಿಂದ ಪ್ರತ್ಯೇಕಿಸು ವ ಬಗ್ಗೆ ಚಿಂತನೆ ಇದೆ.ನವೋದಯ ಟ್ರಸ್ಟ್ ಬಗ್ಗೆ ವಿರೋಧವಿಲ್ಲ ಆದರೆ ಡಿಸಿಸಿ ಬ್ಯಾಂಕ್ ನಿಂದ ನವೋದಯ ಟ್ರಸ್ಟ್ ಗೆ 19 ಲಕ್ಷ ವರ್ಗಾವಣೆ ಗೆ ಅವಕಾಶವಿಲ್ಲ. ಸಹಕಾರಿ ರಂಗದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಡಿಸೆಂಬರ್ ತಿಂಗಳಲ್ಲಿ ಸೂಕ್ತ ತಿದ್ದುಪಡಿ ಮಾಡಲಾಗುವುದು . ಮುಂದಿನ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಕೋಟಾಶ್ರೀನಿವಾಸ ಪೂಜಾರಿಯವರಿಗೆ ಶುಭ ಹಾರೈಸುವುದಾಗಿ ಅವರು ತಿಳಿಸಿದ್ದಾರೆ.
ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ,ಬಂದರು, ಮೀನು ಗಾರಿಕೆ ಸಚಿವ ಎಸ್ .ಅಂಗಾರ ಮತ್ತು ಶಾಸಕರಾದ, ರಾಜೇಶ್ ನಾಯ್ಕ್ , ಹರೀಶ್ ಪೂಂಜ,ಉಮಾನಾಥ ಕೋ ಟ್ಯಾನ್,ಡಾ.ಭರತ್ ಶೆಟ್ಟಿ,ಪ್ರತಾಪ್ ಸಿಂಹ ನಾಯಕ್ ,ಬಿಜೆಪಿ ಉಪಾಧ್ಯಕ್ಷ ಎಲ್. ಶಂಕರಪ್ಪ, ನಿಗಮ ಮಂಡಳಿಯ ಅಧ್ಯಕ್ಷ ರಾದ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮೈಸೂರು ಎಲೆಕ್ಟ್ರೀಕ್ ಇಂಡಸ್ಟ್ರೀ ಸ್ ಲಿಮಿಟೆಡ್ ನ ಸಂತೋಷ್ ಕುಮಾರ್ ಬೊಳಿಯಾರ್, ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ರಾಜ್ಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ,ದ.ಕ ಬಿಜೆಪಿ ಉಪಾಧ್ಯಕ್ಷೆ , ಕಸ್ತೂರಿ ಪಂಜ,ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು. ದ.ಕ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಸ್ವಾಗತಿಸಿದರು.











