ಸೆಮಿಫೆನಲ್ಗೆ ಸಿಂಧು
ಇಂಡೋನೇಶ್ಯ ಬ್ಯಾಡ್ಮಿಂಟನ್ ಟೂರ್ನಿ

photo:the quint
ಬಾಲಿ, ನ.19: ಎರಡು ಬಾರಿಯ ಒಲಿಂಪಿಯನ್ ಭಾರತದ ಶಟ್ಲರ್ ಪಿ.ವಿ.ಸಿಂಧು ಇಂಡೋನೇಶ್ಯ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
ಶುಕ್ರವಾರ ಇಲ್ಲಿ 35 ನಿಮಿಷಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಸಿಂಧು ಅವರು ಟರ್ಕಿಯ ಆಟಗಾರ್ತಿ ನೆಸ್ಲಿಹಾನ್ ಯಿಗಿತ್ ಅವರನ್ನು 21-13, 21-10 ನೇರ ಗೇಮ್ಗಳ ಅಂತರದಿಂದ ಮಣಿಸಿದ್ದಾರೆ.
ಹಾಲಿ ವಿಶ್ವ ಚಾಂಪಿಯನ್ ಸಿಂಧು ಶ್ರೇಯಾಂಕರಹಿತ ಯಿಗಿತ್ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಹೆಡ್-ಟು-ಹೆಡ್ ದಾಖಲೆಯನ್ನು 4-0ಗೆ ವಿಸ್ತರಿಸಿದರು.
ಹೈದರಾಬಾದ್ನ 26ರ ಹರೆಯದ ಆಟಗಾರ್ತಿ ಕಳೆದ ತಿಂಗಳು ನಡೆದಿದ್ದ ಡೆನ್ಮಾರ್ಕ್ ಓಪನ್ನಲ್ಲೂ ಯಿಗಿತ್ರನ್ನು ಸೋಲಿಸಿದ್ದರು. ಸಿಂಧು ಟೂರ್ನಿಯಲ್ಲಿ ಈ ತನಕ ಸುಲಭ ಎದುರಾಳಿಯನ್ನು ಎದುರಿಸಿದ್ದರು. ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ.
Next Story