ಕೇರಳ ರಾಜ್ಯಕ್ಕೆ ಕೆಎಸ್ಸಾರ್ಟಿಸಿ ಸಾರಿಗೆ ಪುನರ್ ಆರಂಭ

ಬೆಂಗಳೂರು, ನ. 20: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ವತಿಯಿಂದ ಕೇರಳ ರಾಜ್ಯದ ಕಣ್ಣಾನೂರು, ಕಾಸರಗೋಡು ಹಾಗೂ ಕಾನ್ಹಗಾಡ್‍ಗೆ ಸಾರಿಗೆ ಕಾರ್ಯಾಚರಣೆ ಪುನರ್ ಆರಂಭಿಸಲಾಗಿದೆ.
ಬೆಂಗಳೂರಿನಿಂದ ಕಾಸರಗೋಡುಗೆ ನಾನ್ ಎಸಿ ಸ್ಲೀಪರ್ ರಾತ್ರಿ 8 ಗಂಟೆಗೆ ಹೊರಡಲಿದ್ದು, ಬೆಳಗ್ಗೆ 5:45ಕ್ಕೆ ಕಾಸರಗೋಡು ತಲುಪಲಿದೆ. ಎಸಿ ಸ್ಲೀಪರ್ ರಾತ್ರಿ 9:15ಕ್ಕೆ ಬೆಂಗಳೂರು ಹೊರಡಲಿದ್ದು, ಬೆಳಗ್ಗೆ 5:45ಕ್ಕೆ ಕಾಸರಗೋಡು ತಲುಪಲಿದೆ. ಬೆಂಗಳೂರು-ಕಣ್ಣಾನೂರು ಎಸಿ ಸ್ಲೀಪರ್ ರಾತ್ರಿ 9ಕ್ಕೆ ಹೊರಡಲಿದ್ದು ಬೆಳಗ್ಗೆ 6:30ಕೆ ಕಣ್ಣಾನೂರು ತಲುಪಲಿದೆ. ಬೆಂಗಳೂರು-ಕಾನ್ಹಗಾಡ್ ವೋಲ್ವೋ ರಾತ್ರಿ 9ಕ್ಕೆ ಹೊರಡಲಿದ್ದು ಮರುದಿನ ಬೆಳಗ್ಗೆ 6:30ಕ್ಕೆ ಕಾನ್ಹಗಾಡ್ ತಲುಪಲಿದೆ ಎಂದು ಕೆಎಸ್ಸಾರ್ಟಿಸಿ ಪ್ರಕಟಣೆ ತಿಳಿಸಿದೆ.
Next Story





