ಮಂಗಳೂರು: ಫಿಂಚಸ್ ಉಡುಪು ಮಳಿಗೆ ಉದ್ಘಾಟನೆ

ಮಂಗಳೂರು : ನಗರದ (ಪಂಜೆ ಮಂಗೇಶರಾವ್ ರಸ್ತೆ ) ಪಿ.ಎಂ.ರಾವ್ ರಸ್ತೆಯ ಹಂಪನಕಟ್ಟೆ ಅಂಚೆ ಕಚೇರಿಯ ಬಳಿಯ ಭಾರತ್ ಬಿಲ್ಡಿಂಗ್ ನಲ್ಲಿಂದು ಮಹಿಳೆಯರ, ಮಕ್ಕಳ, ಪುರುಷರ ಮತ್ತು ನವಜಾತ ಶಿಶುಗಳ ಆಕರ್ಷಕ ಬ್ರಾಂಡೆಡ್ ಕಂಪೆನಿಗಳ ಉಡುಪುಗಳ ಮಳಿಗೆ ಫಿಂಚಸ್ ಇಂದು ಇಕ್ರಾ ಸಂಸ್ಥೆಯ ಶಿಕ್ಷಕರಾದ ಸಾಲಿಂ ಮೌಲಾನ ಉದ್ಘಾಟಿಸಿದರು.
ಈ ಸಂದರ್ಭ ಫಿಂಚಸ್ ಉಡುಪು ಮಳಿಗೆಯ ಪಾಲುದಾರರಾದ ಬಾಸಿತ್ ಮತ್ತು ಸಾವೂದ್ ಉಪಸ್ಥಿತರಿದ್ದು, ಅತಿಥಿಗಳನ್ನು ಸ್ವಾಗತಿಸಿದರು.
ಈ ಮಳಿಗೆ ಉತ್ಕೃಷ್ಟ ಗುಣಮಟ್ಟದ ಉಡುಪುಗಳನ್ನು ಮಿತದರದಲ್ಲಿ ಮತ್ತು ವಿಶೇಷ ರಿಯಾಯಿತಿ ಕೊಡುಗೆಯೊಂದಿಗೆ ಗ್ರಾಹಕರಿಗೆ ನೀಡಲಿದೆ. ಈಗಾಗಲೇ ನಗರದಲ್ಲಿ ಒಂದು ಮಳಿಗೆಯನ್ನು ಹೊಂದಿರುವ ಈ ಸಂಸ್ಥೆ ಇದೀಗ ಮಂಗಳೂರಿನಲ್ಲಿ ಎರಡನೆ ಮಳಿಗೆಯನ್ನು ಆರಂಭಿಸಿದೆ. ಭಟ್ಕಳದಲ್ಲಿಯೂ ಎರಡು ಉಡುಪು ಮಳಿಗೆಯನ್ನು ಹೊಂದಿರುವ ಫಿಂಚಸ್ ಉಡುಪು ಮಳಿಗೆ ಮಕ್ಕಳ, ಮಹಿಳೆಯರ, ಪುರುಷರ ಮತ್ತು ವಿಶೇಷವಾಗಿ ಶಿಶುಗಳ ಗುಣಮಟ್ಟದ ಉಡುಪುಗಳ ದೇಶ, ವಿದೇಶದ ಖ್ಯಾತ ಕಂಪೆನಿಗಳ ಉತ್ಪನ್ನಗಳನ್ನು ಹೊಂದಿದೆ ಎಂದು ಮಳಿಗೆಯ ಮಾಲಕರು ತಿಳಿಸಿದ್ದಾರೆ.






