Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಫ್ಯಾಶಿಸಂ ಖಂಡಿತವಾಗಿಯೂ ಸೋಲಲಿದೆ; ರೈತ...

ಫ್ಯಾಶಿಸಂ ಖಂಡಿತವಾಗಿಯೂ ಸೋಲಲಿದೆ; ರೈತ ಯೋಧರಿಗೆ ಸೆಲ್ಯೂಟ್: ಎಸ್‍ಡಿಪಿಐ

ವಾರ್ತಾಭಾರತಿವಾರ್ತಾಭಾರತಿ20 Nov 2021 9:38 PM IST
share
ಫ್ಯಾಶಿಸಂ ಖಂಡಿತವಾಗಿಯೂ ಸೋಲಲಿದೆ; ರೈತ ಯೋಧರಿಗೆ ಸೆಲ್ಯೂಟ್: ಎಸ್‍ಡಿಪಿಐ

ಬೆಂಗಳೂರು, ನ. 20: `ಒಂದು ವರ್ಷ ಕಾಲ ಐತಿಹಾಸಿಕ ಹೋರಾಟ ನಡೆಸಿ ಜಯಗಳಿಸಿದ ರೈತರನ್ನು ಅಭಿನಂದಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರು, `ರೈತರಿಗೆ ಅಭಿನಂದನೆಗಳು, ಇದು ಸಂತೋಷ ಮತ್ತು ಹೆಮ್ಮೆಯ ಕ್ಷಣ' ಎಂದು ಪ್ರತಿಕ್ರಿಯಿಸಿದ್ದಾರೆ.

`ಪ್ರತಿಭಟನೆಯ ಆರಂಭದಿಂದಲೂ ಪ್ರತಿಭಟನಾನಿರತ ರೈತರಿಗೆ ಬೇಷರತ್ ಬೆಂಬಲ ನೀಡಿರುವ ಮತ್ತು ರೈತರೊಂದಿಗೆ ನಿಂತಿರುವ ಎಸ್‍ಡಿಪಿಐ, ರೈತರ ಪ್ರತಿಭಟನೆಗಳು ಮತ್ತು ಹರತಾಳಗಳಲ್ಲಿ ಭಾಗವಹಿಸಿತ್ತು. ಮಾತ್ರವಲ್ಲ, ರೈತರೊಂದಿಗೆ ಐಕ್ಯಮತ್ಯ ಪ್ರದರ್ಶಿಸಲು ದೇಶಾದ್ಯಂತ ಪಕ್ಷದ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ವಿಜಯ ಮತ್ತು ಸಂತೋಷದ ಕ್ಷಣವನ್ನು ಪಕ್ಷ ಹಂಚಿಕೊಳ್ಳುತ್ತಿದೆ' ಎಂದು ಅವರು ತಿಳಿಸಿದ್ದಾರೆ.

`ನೀವು ಭಾರತೀಯ ಫ್ಯಾಶಿಸಂ ಅನ್ನು ಮಂಡಿಯೂರುವಂತೆ ಮಾಡಿದ್ದೀರಿ, ಎಷ್ಟೇ ದಬ್ಬಾಳಿಕೆಯ ಆಡಳಿತಗಾರನೂ, ಜನರ ಪ್ರತಿರೋಧ ಮತ್ತು ಆಕ್ರೋಶದ ಎದುರು ನಿಲ್ಲಲು ಸಾಧ್ಯವಿಲ್ಲ ಎಂದು ನೀವು ತೋರಿಸಿದ್ದೀರಿ. ಇದು ದೇಶದ ಕ್ರೂರ ಫ್ಯಾಶಿಸ್ಟ್ ಸರಕಾರದ ವಿರುದ್ಧ ಜನರ ಜಯವಾಗಿದೆ; ಫ್ಯಾಶಿಸಂ ವಿಫಲವಾಗಲೇ ಬೇಕಾಗುತ್ತದೆ' ಎಂದು ಫೈಝಿ ಹೇಳಿದ್ದಾರೆ.

`ಕೇಂದ್ರ ಸರಕಾರವು ಅಂಗೀಕರಿಸಿದ್ದ ಕೃಷಿ ಕಾನೂನು ತಿದ್ದುಪಡಿಗಳನ್ನು ಹಿಂಪಡೆದುಕೊಳ್ಳುವಂತೆ ಒತ್ತಾಯಿಸಿ ದೇಶದ ಬೆನ್ನೆಲುಬಾಗಿರುವ ರೈತರು ಒಂದು ವರ್ಷದಿಂದ ಬೀದಿಯಲ್ಲಿ ಹೋರಾಟ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ರೈತರ ಚಳವಳಿಯ ಬಗ್ಗೆ ಸರಕಾರದ ಧೋರಣೆ ಹೆಚ್ಚು ನಕಾರಾತ್ಮಕ ಮತ್ತು ನಿರ್ಲಕ್ಷ್ಯದಿಂದ ಕೂಡಿತ್ತು. ರೈತರ ಸಂಕಟಗಳು ಮತ್ತು ಬೇಡಿಕೆಗಳನ್ನು ಆಲಿಸುವ ಕನಿಷ್ಠ ಪ್ರಜಾಸತ್ತಾತ್ಮಕ ಸೌಜನ್ಯವನ್ನು ಕೂಡ ತೋರಿಸಲು ಅಥವಾ ಅವರೊಂದಿಗೆ ಸಕಾರಾತ್ಮಕ ಚರ್ಚೆ ನಡೆಸುವ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳಲಿಲ್ಲ.

ಅವರು ಪ್ರತಿಭಟನೆ ಮತ್ತು ಪ್ರತಿಭಟನಾಕಾರರನ್ನು ಹತ್ತಿಕ್ಕಲು, ಕತ್ತು ಹಿಸುಕಲು ಮತ್ತು ಕೊಲ್ಲಲು ಪ್ರಯತ್ನಿಸುತ್ತಿದ್ದರು. ಕೇಂದ್ರ ಸಚಿವರೊಬ್ಬರ ಮಗ ಪ್ರತಿಭಟನಾನಿರತ ರೈತರ ಮೇಲೆ ಅವರ ವಾಹನ ಹರಿಸುವ ಮೂಲಕ ಕೆಲವು ರೈತರನ್ನು ಹತ್ಯೆ ಮಾಡಿದರು. ಒಂದು ವರ್ಷದಲ್ಲಿ ಅನೇಕ ಪ್ರತಿಭಟನಾಕಾರರು ಹುತಾತ್ಮರಾಗಿದ್ದಾರೆ. ಅಂತಿಮವಾಗಿ, ವಿವಾದಾಸ್ಪದ ಕಾನೂನುಗಳನ್ನು ಜಾರಿಗೆ ತಂದೇ ತೀರುತ್ತೇವೆ ಎಂಬ ತಮ್ಮ ಹಿಂದಿನ ಹಠಮಾರಿ ನಿಲುವಿನಿಂದ ಹೊರಬಂದು ಅದನ್ನು ಹಿಂಪಡೆದುಕೊಳ್ಳಲು ಕೇಂದ್ರ ಸರಕಾರವು ಒಪ್ಪಿಕೊಂಡಿದೆ.

`ನ್ಯಾಯಕ್ಕಾಗಿ ನಡೆಯುವ ಹೋರಾಟಗಳು ಎಂದಿಗೂ ವಿಫಲವಾಗುವುದಿಲ್ಲ. ಆದರೆ, ಗೆಲುವು ಕೆಲವೊಮ್ಮೆ ವಿಳಂಬವಾಗಬಹುದು. ಈ ಚಳುವಳಿಯ ಜಯವು ದುರಹಂಕಾರಿ ಜನವಿರೋಧಿ ಆಡಳಿತಗಾರರಿಗೆ ಅವರ ಪತನದ ಕ್ಷಣಗಣನೆ ಪ್ರಾರಂಭವಾಗಿದೆ ಎಂಬ ವಿಶಿಷ್ಟ ಎಚ್ಚರಿಕೆಯಾಗಿದೆ. ಯಾವುದೇ ನಿರಂಕುಶಪ್ರಭು ಅಥವಾ ಫ್ಯಾಶಿಸ್ಟ್ ಆಡಳಿತಗಾರ ಖಂಡಿತವಾಗಿಯೂ ಬಲವಾದ ಮತ್ತು ಸ್ಥಿರವಾದ ಜನರ ಪ್ರತಿರೋಧದ ಎದುರು ಸೋಲುತ್ತಾನೆಂದು ಈ ರೈತರ ಗೆಲುವು ತೋರಿಸುತ್ತದೆ. ಸರಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಆಡಳಿತ ಪಕ್ಷದ ದೌರ್ಜನ್ಯಕ್ಕೆ ಒಳಗಾಗಿರುವ ಲಕ್ಷಾಂತರ ಭಾರತೀಯ ಜನರಿಗೆ ಈ ಗೆಲುವು ಸ್ಫೂರ್ತಿಯಾಗಿದೆ. ಆಡಳಿತಗಾರರು ಅರ್ಥ ಮಾಡಿಕೊಳ್ಳಲು ಸಿದ್ಧರಿದ್ದರೆ, ಜನರ ವಿರುದ್ಧವಾಗಿರುವ ಯಾವುದೇ ಸರಕಾರ ಉಳಿಯಲು ಸಾಧ್ಯವಿಲ್ಲ ಎಂಬ ಪಾಠವನ್ನು ಇದು ನೀಡುತ್ತದೆ. ನ್ಯಾಯವು ಗೆಲ್ಲುತ್ತದೆ ಮತ್ತು ಫ್ಯಾಸಿಸಂ ಸೋಲುತ್ತದೆ ಎಂದು ವಿಶ್ಲೇಷಿಸಿದ್ದಾರೆ.

`ಸರಕಾರಿ ಪ್ರಾಯೋಜಕತ್ವದ ಭಯೋತ್ಪಾದನೆ ಮತ್ತು ಆಳುವವರ ಬೆಂಬಲದೊಂದಿಗೆ ರಾಷ್ಟ್ರ ವಿರೋಧಿ ಶಕ್ತಿಗಳ ದೌರ್ಜನ್ಯಗಳಿಗೆ ಸಂತ್ರಸ್ತರಾದವರೆಲ್ಲರೂ ಈ ವಿಜಯದ ಸಂದೇಶವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅನ್ಯಾಯದ ವಿರುದ್ಧ ಬಲವಾದ ಮತ್ತು ದೃಢವಾದ ಪ್ರತಿರೋಧ ಮತ್ತು ಚಳುವಳಿಗಳ ಮೂಲಕ ಫ್ಯಾಶಿಸ್ಟ್‍ಗಳನ್ನು ಸೋಲಿಸಲು ಮತ್ತು ಅಧಿಕಾರದಿಂದ ಕಿತ್ತೊಗೆಯಲು ಒಗ್ಗಟ್ಟಿನಿಂದ ನಿಂತು ದೇಶವನ್ನು ರಕ್ಷಿಸಬೇಕು' ಎಂದು ಎಂ.ಕೆ.ಫೈಝಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X