ಗುತ್ತಿಗೆದಾರರ ಭ್ರಷ್ಟಾಚಾರ ಆರೋಪದ ಪತ್ರದ ಬಗ್ಗೆ ರಾಜ್ಯಪಾಲರು ತನಿಖೆಗೆ ಆದೇಶಿಸಲಿ : ಐವನ್ ಡಿಸೋಜ

ಮಂಗಳೂರು : ರಾಜ್ಯದ ಲೋಕೋಪಯೋಗಿ ಕಾಮಗಾರಿಗಳ ಗುತ್ತಿಗೆದಾರರು ಪ್ರಧಾನಿಗೆ ಬರೆದ ಪತ್ರದಲ್ಲಿ ಪ್ರತಿ ಗುತ್ತಿಗೆಯಲ್ಲಿ ಶೇ.40 ರಷ್ಟು ಕಮೀಷನ್ ನೀಡಬೇಕಾಗಿದೆ. ಇದರಿಂದ ರಾಜ್ಯದ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದನ್ನು ತೋರಿಸುತ್ತದೆ. ಈ ಬಗ್ಗೆ ರಾಜ್ಯ ಪಾಲರು ಸ್ವಯಂ ಪ್ರೇರಿತರಾಗಿ ತನಿಖೆಗೆ ಆದೇಶಿಸಬೇಕು ಎಂದು ಮಾಜಿ ಶಾಸಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಐವನ್ ಡಿ ಸೋಜ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದ ಪರಿಸ್ಥಿತಿಯ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಕಾರಣ ಈ ಬಗ್ಗೆ ದೇಶ ದ ಪ್ರಧಾನಿ ಉತ್ತರಿಸಬೇಕಾಗಿದೆ ಎಂದು ಐವನ್ ಆಗ್ರಹಿಸಿದ್ದಾರೆ. ಗುತ್ತಿಗೆದಾರರ ಮೂಲಕ ಹೋಗುತ್ತಿರುವ ಕಮೀಷನ್ ಹಣ ಎಲ್ಲಿಗೆ ಹೋಗುತ್ತದೆ ಎನ್ನುವ ಬಗ್ಗೆ ದೇಶದ ಜನರಿಗೆ ತಿಳಿಯ ಬೇಕಾದರೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಐವನ್ ಆಗ್ರಹಿಸಿದ್ದಾರೆ.
ಈ ರೀತಿಯ ಅಕ್ರಮ ಹಣವನ್ನು ಗಳಿಸುತ್ತಿರುವ ಕಾರಣ ಚುನಾವಣೆಯಲ್ಲಿ ಅಕ್ರಮ ಹಣದ ಹೊಳೆ ಹರಿಯುತ್ತಿದೆ.ದೇಶದಲ್ಲಿ ಬಿಜೆಪಿ ಗರಿಷ್ಠ ದೇಣಿಗೆ ಗಳಿಸುತ್ತಿದೆ.ಈ ರೀತಿಯ ಭ್ರಷ್ಟಾಚಾ ರದಿಂದ ಅಭಿವೃದ್ಧಿ ಕುಂಠಿತವಾಗಿ ದೆ.ಕಾಮ ಗಾರಿಗಳಲ್ಲೂ ಕಳಪೆ ಗಣಮಟ್ಟ ಕಾಣುತ್ತಿದ್ದೇವೆ. ಟೆಂಡರ್ ಪ್ರಕ್ರಿಯೆ ಪಾರದರ್ಶಕ ಆಡಳಿತಕ್ಕೆ ರಾಜ್ಯದಲ್ಲಿ ಅರ್ಥ ಇಲ್ಲದಂತಾಗಿದೆ ಎಂದು ಐವನ್ ಆರೋಪಿಸಿದ್ದಾರೆ.
ದೇಶದಲ್ಲಿ ರೈತರ ಹೋರಾಟಕ್ಕೆ ಜಯ ಸಂದಿದೆ. ಈ ಹೋರಾಟದಲ್ಲಿ ನಿಧನರಾದ ಸುಮಾರು 700 ರೈತರ ಕುಟುಂಬಗಳಿಗೆ ಕನಿಷ್ಠ ತಲಾ 50 ಲಕ್ಷ ರೂ ಪರಿಹಾರ ನೀಡಬೇಕು. ರಾಜ್ಯದಲ್ಲಿ ರೈತರಿಗೆ ನೀಡುತ್ತಿದ್ದ ಬೆಳೆ ಸಾಲ ಸ್ಥಗಿತಗೊಳಿಸಿರುವುದನ್ನು ಪುನಾರಂಭಿಸಬೇಕು ಎಂದು ಐವನ್ ಡಿಸೋಜ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮೀನಾ ಟೆಲ್ಲಿಸ್ ,ಭಾಸ್ಜರ ರಾವ್,ಶುಭೋದಯ ಆಳ್ವ, ಚಿತ್ತರಂಜನ್ ಶೆಟ್ಟಿ, ಪಿಯೂಸ್ ಡಿಸೋಜ ಮೊದಲಾದ ವರು ಉಪಸ್ಥಿತರಿದ್ದರು







