ಬಾಗೇಪಲ್ಲಿ: ಭಾರೀ ಮಳೆಗೆ ಮನೆ ಕುಸಿತ; ಕುರಿ, ಮೇಕೆಗಳು ಸಾವು

ಸಾಂದರ್ಭಿಕ ಚಿತ್ರ
ಬಾಗೇಪಲ್ಲಿ: ಭಾರೀ ಮಳೆಗೆ ಮನೆಯೊಂದು ಕುಸಿದು ಬಿದ್ದು 6 ಕುರಿ 4 ಮೇಕೆಗಳು ಸಾವನ್ನಿಪ್ಪಿರುವ ಘಟನೆ ತಾಲೂಕಿನ ಪಾತಪಾಳ್ಯ ಹೋಬಳಿ ತೋಳ್ಳಪಲ್ಲಿ ಗ್ರಾ.ಪಂ ವ್ಯಾಪ್ತಿಯ ಯರ್ರಪೆಂಟ್ಲ ಗ್ರಾಮದಲ್ಲಿ ನಡೆದಿದೆ.
ಯರ್ರಪೆಂಟ್ಲ ಗ್ರಾಮದ ಚಂದ್ರಪ್ಪ ಅವರಿಗೆ ಕುರಿ ಮೇಕೆಗಳು ಜೀವನದಾರವಾಗಿದ್ದವು ಆದರೆ ಸತತ ಹಲವು ದಿನಗಳಿಂದ ಬೀಳುತ್ತಿರುವ ಮಹಾ ಮಳೆಗೆ ಚಂದ್ರಪ್ಪ ಎಂಬುವವರ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದ್ದು ಕುರಿ ಮೇಕೆಗಳು ಮೃತಪಟ್ಟಿದೆ. ಸರ್ಕಾರ ಕೂಡಲೇ ಇವರ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುದ್ದಿ ತಿಳಿದ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಘಟನಾ ಸ್ಥಳಕ್ಕೆ ಬೇಟಿ ನೀಡಿ ಆಕುಟುಂಬದ ಚರ್ಚೆ ಮಾಡಿ ನಾವು ನಿಮ್ಮ ಜೊತೆ ಇದ್ದೇವೆ ನಾನು ಸರ್ಕಾರದ ಜೊತೆ ಚರ್ಚೆ ಮಾಡಿ ಪರಿಹಾರ ಕೊಡಿಸುತ್ತೇನೆ ಎಂದು ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಚೆನ್ನರಾಯಪ್ಪ ಎಲ್.ವೆಂಕಟೇಶ್, ಜಿ.ಎಂ.ರಾಮಕೃಷ್ಣ, ರಾಮಾಂಜಿ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.
Next Story





