ಕೊಲೆ ಯತ್ನದ ಆರೋಪದ ಮೇಲೆ ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷೆಯನ್ನು ಬಂಧಿಸಿದ ತ್ರಿಪುರ ಪೊಲೀಸರು

photo: ANI/twitter
ಕೋಲ್ಕತಾ: ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷೆ ಸಯಾನಿ ಘೋಷ್ ಅವರನ್ನು ಕೊಲೆ ಯತ್ನದ ಆರೋಪದ ಮೇಲೆ ತ್ರಿಪುರಾ ಪೊಲೀಸರು ಬಂಧಿಸಿದ್ದಾರೆ. ಘೋಷ್ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ತೃಣಮೂಲ ಕಾಂಗ್ರೆಸ್ ಶೀಘ್ರದಲ್ಲೇ ಜಾಮೀನು ಮನವಿ ಸಲ್ಲಿಸುವ ನಿರೀಕ್ಷೆಯಿದೆ.
"ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಘೋಷ್ ರನ್ನು ಬಂಧಿಸಲಾಗಿದೆ. ನಾವು ಐಪಿಸಿಯ ಸೆಕ್ಷನ್ 307, 153 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದೇವೆ"ಎಂದು ಪಶ್ಚಿಮ ತ್ರಿಪುರಾದ ಹೆಚ್ಚುವರಿ ಎಸ್ಪಿ (ನಗರ) ಬಿ.ಜೆ. ರೆಡ್ಡಿ ಅವರು ಹೇಳಿದರು.
ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಕೆಲವು ಮಹಿಳಾ ಪೊಲೀಸರು ಸಯಾನಿ ಘೋಷ್ ತಂಗಿದ್ದ ಹೋಟೆಲ್ಗೆ ಬಂದರು. ನಾವು ಘೋಷ್ ಅವರನ್ನು ಪ್ರಶ್ನಿಸಲು ಬಯಸಿದ್ದೇವೆ ಎಂದು ಹೇಳಿದರು. ನಂತರ. ಇತರ ಕಾರ್ಯಕರ್ತರು ಪೊಲೀಸ್ ಠಾಣೆಯನ್ನು ತಲುಪಿದಾಗ. ಸಯಾನಿ ಅವರ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದೆ. ಸಯಾನಿ ಅವರು ಶನಿವಾರ ಸಂಜೆ ತನ್ನ ವಾಹನವನ್ನು ಕೆಲವು ಬಿಜೆಪಿ ಕಾರ್ಯಕರ್ತರ ಮೇಲೆ ಓಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಕಾರ್ಯಕರ್ತರು ತಿಳಿದುಕೊಂಡರು ಎಂದು ತೃಣಮೂಲ ಕಾಂಗ್ರೆಸ್ನ ಉನ್ನತ ಮೂಲಗಳು ತಿಳಿಸಿವೆ.
ಕೆಲವು ಪೊಲೀಸರು ಟಿಎಂಸಿ ನಾಯಕರು ತಂಗಿರುವ ಹೋಟೆಲ್ಗೆ ಬಂದಿದ್ದು ಸುಶ್ಮಿತಾ ದೇವ್ ಅವರ ವಾಹನವನ್ನು ವಶಪಡಿಸಿಕೊಳ್ಳಲು ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.