ನ. 22: ದ.ಕ.ಜಿಲ್ಲೆಗೆ ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಭೇಟಿ
ಮಂಗಳೂರು, ನ.21: ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷ ವೌಲಾನಾ ಶಾಫಿ ಸಅದಿ ನ.22ರಂದು ದ.ಕ.ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
ಬೆಳಗ್ಗೆ 10:45ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಶಾಫಿ ಸಅದಿ 12 ಗಂಟೆಗೆ ಬಂದರ್‌ನ ಹಝ್ರತ್ ಜಲಾಲ್ ಮಸ್ತಾನ್ ದರ್ಗಾ, 12:30ಕ್ಕೆ ಕಚ್ಚಿಮೆಮನ್ ಮಸೀದಿಗೆ ಸಂಬಂಧಿಸಿದ ವಕ್ಫ್ ಆಸ್ತಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
12:40ಕ್ಕೆ ಹಂಪನಕಟ್ಟೆಯ ಇಸ್ಲಾಮಿಕ್ ಟ್ರಸ್ಟ್, 1 ಗಂಟೆಗೆ ಪೊಲೀಸ್‌ಲೈನ್‌ನ ಫೌಝಿಯಾ ಜುಮಾ ಮಸ್ಜಿದ್, 2:30ಕ್ಕೆ ಉಳ್ಳಾಲ ದರ್ಗಾ ಮತ್ತು 3:30ಕ್ಕೆ ನಂದಾವರ ದರ್ಗಾ, 6 ಗಂಟೆಗೆ ಕಾಜೂರು ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಬೆಳ್ತಂಗಡಿಯಲ್ಲಿ ವಾಸ್ತವ್ಯ ಹೂಡುವ ಶಾಫಿ ಸಅದಿ ನ.23ರಂದು ಬೆಳಗ್ಗೆ ಹಾಸನ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





