ಚಿಕ್ಕಮಗಳೂರು ಜಿಲ್ಲಾ ಕಸಾಪ ಚುನಾವಣೆ: ಸಾಹಿತಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಜಿಲ್ಲಾಧ್ಯಕರಾಗಿ ಆಯ್ಕೆ

ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್
ಚಿಕ್ಕಮಗಳೂರು, ನ.21: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರವಿವಾರ ನಡೆದ ಚುನಾವಣೆಯಲ್ಲಿ ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಎಂ.ಸಿ.ಶಿವಾನಂದ ಸ್ವಾಮಿ ಎದುರು 650 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.
ಅಧ್ಯಕ್ಷೀಯಗಾಧಿ ಕಣದಲ್ಲಿ ಎಂ.ಸಿ.ಶಿವಾನಂದಸ್ವಾಮಿ, ಸುಂದರ್ಬಂಗೇರಾ, ಬಿಳಿಗಿರಿ ವಿಜಯಕುಮಾರ್, ಸೂರಿಶ್ರೀನಿವಾಸ್, ಎಚ್.ಡಿ.ರೇವಣ್ಣ ಸ್ಫರ್ಧಿಸಿದ್ದರು. ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಮತ್ತು ಎಂ.ಸಿ.ಶಿವಾನಂದ ಸ್ವಾಮಿ ನಡುವೆ ತೀವ್ರ ಪೈಪೋಟಿ ನಡೆಸಿ ದ್ದು, ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಗೆಲುವು ಸಾಧಿಸಿದ್ದಾರೆ.
ಭಾನುವಾರ ಬೆಳಿಗ್ಗೆ 8ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭಗೊಂಡು ಸಂಜೆ 4ಗಂಟೆಗೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿತು. 4ಗಂಟೆಯಿಂದ ಆರಂಭವಾಗ ಮತ ಎಣಿಕೆ ಕಾರ್ಯ ರಾತ್ರಿ 7:30ರ ವರೆಗೂ ನಡೆಯಿತು. ಆಯಾ ಮತಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಏಕಕಾಲದಲ್ಲಿ ಆರಂಭಗೊಂಡಿದ್ದು, ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಮತ್ತು ಎಂ.ಸಿ.ಶಿವಾನಂದ ಸ್ವಾಮಿ ನಡುವೆ ಕೊನೆಯ ವರೆಗೂ ಪೈಪೋಟಿ ಏರ್ಪಟ್ಟಿತ್ತು.
ನರಸಿಂಹರಾಜಪುರ 60, ಬಾಳೆಹೊನ್ನೂರು 55, ಕಳಸ 18, ಯಗಟಿ 104, ಅಜ್ಜಂಪುರ 153, ಕೊಪ್ಪ 103, ಶೃಂಗೇರಿ 157, ಜಯಪುರ 66, ಬೀರೂರು 79, ಆಲ್ದೂರು 58, ಮೂಡಿಗೆರೆ 202 ಚಿಕ್ಕಮಗಳೂರು 421 ಹಾಗೂ ಕಡೂರಿನಲ್ಲಿ 763 ಮತಗಳನ್ನು ಅಜ್ಜಂಪುರ ಜಿ.ಸೂರಿ ಶ್ರೀನಿವಾಸ್ ಮತ ಪಡೆದುಕೊಂಡರು. ನರಸಿಂಹರಾಜಪುರ ಮತಗಟ್ಟೆಯಲ್ಲಿ 67, ಬಾಳೆಹೊನ್ನೂರು 41, ಕಳಸ 8, ಯಗಟಿ 188, ಅಜ್ಜಂಪುರ 203, ಕೊಪ್ಪ 39, ಶೃಂಗೇರಿ 107, ಜಯಪುರ 32, ಬೀರೂರು 147, ಆಲ್ದೂರು 61, ಮೂಡಿಗೆರೆ 98, ಚಿಕ್ಕಮಗಳೂರು 333 542ಮತಗಳನ್ನು ಎಂ.ಸಿ.ಶಿವಾ ನಂದ ಸ್ವಾಮಿ ಪಡೆದುಕೊಂಡರು.







