ತುಮಕೂರು ಜಿಲ್ಲಾ ಕಸಾಪ ಚುನಾವಣೆ: ಕೆ.ಎಸ್.ಸಿದ್ದಲಿಂಗಪ್ಪಗೆ ಗೆಲುವು

ಕೆ.ಎಸ್.ಸಿದ್ದಲಿಂಗಪ್ಪ
ತುಮಕೂರು: ಇಂದು ನಡೆದ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕೆ.ಎಸ್.ಸಿದ್ದಲಿಂಗಪ್ಪ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಶೈಲಾ ನಾಗರಾಜ್ ಅವರಿಗಿಂತ 713 ಹೆಚ್ಚು ಮತ ಪಡೆದು ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷ ರಾಗಿ ಆಯ್ಕೆಯಾಗಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಒಟ್ಟುಬ5978 ಮತಗಳು(ಶೇ 46) ಮತಗಳು ಚಲಾವಣೆಯಾದರೆ, ಇವುಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಿದ್ದಲಿಂಗಪ್ಪ ಅವರಿಗೆ ಹೆಚ್ಚು ಮತಗಳು ಬಂದಿದ್ದು, ನಗರ ಪ್ರದೇಶದಲ್ಲಿ ಶ್ರೀ ಮತಿ ಶೈಲಾನಾಗರಾಜ್ ಅವರಿಗೆ ಸಿದ್ದಲಿಂಗಪ್ಪ ಅವರಿಗಿಂತ 48 ಹೆಚ್ಚು ಮತಗಳು ಬಂದಿದ್ದು, ಒಟ್ಟಾರೆ ಸಿದ್ದಲಿಂಗಪ್ಪ 713 ಹೆಚ್ಚು ಮತ ಪಡೆದು ಕಸಾಪ ಅಧ್ಯಕ್ಷರಾಗಿ ಆಯ್ಕೆಯಾದರು
Next Story





