ದಲಿತರಿಗೆ ಮೋದಿ ಮಾಡಿದ್ದಾದರು ಏನು ?: ಜಯನ್ ಮಲ್ಪೆ ಪ್ರಶ್ನೆ

ಉಡುಪಿ, ನ.21: ಬ್ರಿಟಿಷರು ಭಾರತಕ್ಕೆ ಬರುವ ಮುನ್ನ ದಲಿತರು ಕಸ ಗುಡಿಸುವವರು ಮತ್ತು ಮಲ ಹೊರುವವರಾಗಿದ್ದರು. ಇನ್ನೂ ದಲಿತರು ಅದೇ ಕಸ ಗುಡಿಸುವ, ಮಲ ಹೊರುವವರೇ ಆಗಿದ್ದಾರೆ. ಆದ್ದರಿಂದ ಅಚ್ಛೆ ದಿನ್ ತರುತ್ತೇನೆಂದ ಮೋದಿ ದಲಿತರಿಗೆ ಮಾಡಿದ್ದಾದರು ಏನು ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಪ್ರಶ್ನಿಸಿದ್ದಾರೆ.
ಮುಲ್ಕಿ ಸಮೀಪದ ಉಳೇಪಾಡಿಯ ಕಂಗುರಿಯಲ್ಲಿ ರವಿವಾರ ಅಂಬೇಡ್ಕರ್ ಯುವಸೇನೆಯ ನೂತನ ಶಾಖೆ ಉದ್ಘಾಟಿಸಿ ಅವರು ಮಾತನಾಡುತಿದ್ದರು. ದೇಶದ ಚೌಕಿಧಾರ್ ಎಂದಕೊಂಡ ಪ್ರಧಾನಿ ಈ ದೇಶದ ಮೂಲನಿವಾಸಿಗಳನ್ನು ನಾಶಮಾಡುತ್ತಿದ್ದಾರೆಯೇ ಹೊರತು ಅವರನ್ನು ರಕ್ಷಿಸುವ ಯಾವ ಶ್ರಮನೂ ಮಾಡುತ್ತಿಲ್ಲ. ದಲಿತರು ಹಿಂದೂ ಧರ್ಮ ತೊರೆಯದೆ ಸ್ವಾತಂತ್ರ್ಯವಿಲ್ಲ ಮತ್ತು ಗೊಡ್ಡು ನಂಬಿಕೆಯ ಆಚರಣೆಗಳಿಂದ ಅಭಿವೃದ್ಧಿಗೊಳ್ಳಲು ಸಾದ್ಯವಿಲ್ಲ ಎಂದರು.
ಅಧ್ಯಕ್ಷತೆಯನ್ನು ದಲಿತ ಮುಖಂಡ ಸದಾಶಿವ ಉರ್ವಸ್ಟೊರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಣಂಬೂರು ಸಹಾಯಕ ಪೋಲಿಸ್ ಆಯುಕ್ತ ಮಹೇಶ್ ಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಮುಲ್ಕಿ ಪೋಲಿಸ್ ನಿರೀಕ್ಷಕ ಕುಸುಮದರ, ಯುವಸೇನೆಯ ಅಧ್ಯಕ್ಷ ಹರೀಶ್ ಸಾಲ್ಯಾನ್, ದಲಿತ ಮುಖಂಡರಾದ ಲೋಕೇಶ್ ಪಡುಬಿದ್ರಿ, ಗಣೇಶ್ ನೆರ್ಗಿ, ದಯಾನಂದ ಕಪ್ಪೆಟ್ಟು, ಕೃಷ್ಟ ಬಂಗೇರ, ರಾಜೀವಿ ವಸಂತ ಮೊದಲಾದವರು ಉಪಸ್ಥಿತರಿದ್ದರು.
ಸಂತೋಷ್ ಮುಲ್ಕಿ ಸ್ವಾಗತಿಸಿದರು. ರಾಮಚಂದ್ರ ಕಂಗುರಿ ವಂದಿಸಿದರು. ಕಾರ್ತಿಕ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.







