ದ.ಕ.ಜಿಲ್ಲೆ: ಕೋವಿಡ್ ಸೋಂಕಿನ 10 ಪ್ರಕರಣ ಪತ್ತೆ
ಮಂಗಳೂರು, ನ.21: ದ.ಕ.ಜಿಲ್ಲೆಯಲ್ಲಿ ರವಿವಾರ ಕೋವಿಡ್ ಸೋಂಕಿನ 10 ಪಾಸಿಟಿವ್ ಪ್ರಕರಣದೊಂದಿಗೆ ಶೇ.0.19 ಪಾಸಿಟಿವ್ ದರ ದಾಖಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 22,26,022 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 20,90,282 ನೆಗೆಟವ್ ಮತ್ತು 1,15,740 ಪಾಸಿಟಿವ್ ಪ್ರಕರಣ ದಾಖಲಾಗಿದೆ. ರವಿವಾರ 15 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ 1,13,952 ಮಂದಿ ಬಿಡುಗಡೆಗೊಂಡಂತಾಗಿದೆ. ಈವರೆಗೆ 1692 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. ಸದ್ಯ 96 ಸಕ್ರಿಯ ಪ್ರಕರಣವಿದೆ.
ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ 88,820 ಪ್ರಕರಣ ದಾಖಲಿಸಿ, 1,07,74,870 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ
Next Story