ಮಂಗಳೂರು: ವಂ.ವಲೇರಿಯನ್ ಲೆವಿಸ್ ನಿಧನ

ಮಂಗಳೂರು, ನ. 21: ಕಾಟಿಪಳ್ಳದ ಇನ್ ಫೆಂಟ್ ಮೇರಿ ಚರ್ಚ್‌ನ ಧರ್ಮಗುರು ವಂ. ವಲೇರಿಯನ್ ಲೆವಿಸ್ (55) ರವಿವಾರ ಸಂಜೆ ಚರ್ಚ್‌ನಲ್ಲಿ ಬಲಿ ಪೂಜೆಯ ಸಂದರ್ಭ ಹೃದಯಾಘಾತದಿಂದ ನಿಧನ ಹೊಂದಿದರು.
ಚರ್ಚ್‌ನ ವಾರ್ಷಿಕ ಉತ್ಸವ ಮುಂದಿನ ಬುಧವಾರ ನಡೆಯಲಿದೆ. ಆ ಹಿನ್ನೆಲೆಯಲ್ಲಿ ರವಿವಾರ ಬಲಿ ಪೂಜೆ ಮತ್ತು ಪ್ರಸಾದದ ಮೆರವಣಿಗೆ ನಡೆದಿತ್ತು. ಮೆರವಣಿಗೆಯ ಬಳಿಕ ಪರಮ ಪ್ರಸಾದದ ಆರಾಧನೆಯ ಸಂದರ್ಭ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು ಎಂದು ತಿಳಿದು ಬಂದಿದೆ.
ಮೂಲತ: ಪುತ್ತೂರು ನಿವಾಸಿಯಾಗಿದ್ದವಂ. ವಲೇರಿಯನ್ ಲೆವಿಸ್ 1995 ರಲ್ಲಿ ಗುರು ದೀಕ್ಷೆಪಡೆದಿದ್ದರು. ಬಳಿಕ 1995- 96 ರಲ್ಲಿ ಬಾರ್ಕೂರು ಚರ್ಚ್‌ನಲ್ಲಿ ಸಹಾಯಕ ಗುರು ಹಾಗೂ ಜಪ್ಪು ಸಂತ ಆಂತೋಣಿ ಆಶ್ರಮದ ಸಹಾಯಕ ನಿರ್ದೇಶಕ, 1998- 2000 ಅವಧಿಯಲ್ಲಿ ವಾಮಂಜೂರು ಚರ್ಚ್‌ನಲ್ಲಿ ಸಹಾಯಕ ಗುರು, ಬಳಿಕ ಕೊಕ್ಕಡ, ಸುಳ್ಯ ಹಾಗೂ ಮಂಜೇಶ್ವರ ಚರ್ಚ್‌ಗಳಲ್ಲಿ ಪ್ರಧಾನ ಗುರುಗಳಾಗಿ ಸೇವೆ ಸಲ್ಲಿಸಿದ್ದರು. 2019 ರಿಂದ ಕಾಟಪಳ್ಳ ಚರ್ಚ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
Next Story





