ರೈಲು ಢಿಕ್ಕಿಯಾಗಿ ಪಬ್ಜಿ ಆಡುತ್ತಿದ್ದ ಇಬ್ಬರು ಬಾಲಕರು ಸಾವು

ಲಕ್ನೋ, ನ. 21: ಮಥುರಾದ ಲಕ್ಷ್ಮೀನಗರದಲ್ಲಿ ಮಥುರಾ-ಕಸ್ಗಂಜ್ ಹಳಿಯಲ್ಲಿ ಕುಳಿತು ಪಬ್ ಜಿ ಆಡುತ್ತಿದ್ದ ಇಬ್ಬರು ಬಾಲಕರು ರೈಲು ಢಿಕ್ಕಿಯಾಗಿ ಮೃತಪಟ್ಟಿದ್ದಾರೆ.
ರೈಲು ಆಗಮಿಸಿದ ಸಂದರ್ಭ ಇಬ್ಬರು ಬಾಲಕರು ಜನಪ್ರಿಯ ಆನ್ಲೈನ್ ಆಟ ಪಬ್ಜಿಯಲ್ಲಿ ಮುಳುಗಿದ್ದರು ಎನ್ನಲಾಗಿದೆ.
ಇಬ್ಬರೂ ಬಾಲಕರ ಮೊಬೈಲ್ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಒಂದು ಮೊಬೈಲ್ ಹಾನಿಗೀಡಾಗಿದೆ. ಇನ್ನೊಂದರಲ್ಲಿ ಪಬ್ ಜಿ ಆಟ ಮುಂದುವರಿದಿತ್ತು ಎಂದು ಜಮುನಾಪುರ ಪೊಲೀಸ್ ಠಾಣೆಯ ಎಸ್ಎಚ್ಒ ಶಶಿ ಪ್ರಕಾಶ್ ಸಿಂಗ್ ಹೇಳಿದ್ದಾರೆ. ಮೃತಪಟ್ಟ ಬಾಲಕರನ್ನು 14 ವರ್ಷದ ಗೌರವ್ ಕುಮಾರ್ ಹಾಗೂ ಕಪಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ 10ನೇ ತರಗತಿ ವಿದ್ಯಾರ್ಥಿಗಳು.
ರೈಲು ಹಳಿಯಲ್ಲಿ ಇಬ್ಬರು ಬಾಲಕರ ಮೃತದೇಹಗಳು ಬಿದ್ದಿರುವ ಬಗ್ಗೆ ಕೆಲವು ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ‘‘ಆನ್ಲೈನ್ ಆಟದ ಬಗ್ಗೆ ನಮಗೆ ಗೊತ್ತಿಲ್ಲ’’ ಎಂದು ಕಪಿಲ್ ನ ತಂದೆ ಸಂಜಯ್ ಕುಮಾರ್ ಹೇಳಿದ್ದಾರೆ.
Next Story