ಟ್ವೆಂಟಿ-20: ಒಟ್ಟು 150 ಸಿಕ್ಸರ್ ಸಿಡಿಸಿದ 2ನೇ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ

ಕೋಲ್ಕತಾ: ಭಾರತದ ಟ್ವೆಂಟಿ-20 ನಾಯಕ ರೋಹಿತ್ ಶರ್ಮಾ ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆದ 3ನೇ ಟ್ವೆಂಟಿ-20 ಪಂದ್ಯದ ಪವರ್‌ಪ್ಲೇನಲ್ಲಿ ಮೂರು ಬೃಹತ್ ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ವೇಳೆ ಅವರು ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 150 ಸಿಕ್ಸರ್‌ಗಳ ಮೈಲಿಗಲ್ಲನ್ನು ತಲುಪಿದರು.
ನ್ಯೂಝಿಲ್ಯಾಂಡ್ ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 165 ಸಿಕ್ಸರ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಈಗ 150 ಸಿಕ್ಸರ್‌ಗಳ ಗಡಿ ದಾಟಿದ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 124 ಗರಿಷ್ಠ ಸಿಕ್ಸರ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 91 ಸಿಕ್ಸರ್‌ಗಳೊಂದಿಗೆ ವಿರಾಟ್ ಕೊಹ್ಲಿ ಪಟ್ಟಿಯಲ್ಲಿರುವ ಇನ್ನೋರ್ವ ಭಾರತೀಯರಾಗಿದ್ದಾರೆ.
Next Story