ಮೂರನೇ ಟ್ವೆಂಟಿ-20: ವಿಲಕ್ಷಣ ಶೈಲಿಯಲ್ಲಿ ಔಟಾದ ಆಲ್ ರೌಂಡರ್ ಹರ್ಷಲ್ ಪಟೇಲ್
photo:twitter
ಕೋಲ್ಕತಾ: ಭಾರತವು ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯವನ್ನು 73 ರನ್ಗಳಿಂದ ಗೆದ್ದಿತು ಹಾಗೂ ಚುಟುಕು ಮಾದರಿ ಪಂದ್ಯದಲ್ಲಿ ಕಿವೀಸ್ ಪಡೆಯ ವಿರುದ್ಧ ಸತತ ಎರಡನೇ ಬಾರಿ ವೈಟ್ವಾಶ್ ಅನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಪ್ರವಾಸಿ ತಂಡಕ್ಕೆ ಗೆಲುವಿಗೆ 185 ರನ್ಗಳ ಗುರಿಯನ್ನು ನಿಗದಿಪಡಿಸಿದ ನಂತರ ಭಾರತ ಮೂರು ಓವರ್ಗಳಲ್ಲಿ 9 ರನ್ ಗೆ 3 ವಿಕೆಟ್ ಕಬಳಿಸಿದ ಅಕ್ಷರ್ ಪಟೇಲ್ ಅವರ ಅಮೋಘ ಬೌಲಿಂಗ್ ನೆರವಿನಿಂದ ಭರ್ಜರಿ ಜಯ ಸಾಧಿಸಿತು.
ಏತನ್ಮಧ್ಯೆ, ಭಾರತದ ಇನ್ನಿಂಗ್ಸ್ ಸಮಯದಲ್ಲಿ ತನ್ನ ಎರಡನೇ ಟ್ವೆಂಟಿ-20 ಪಂದ್ಯ ಆಡುತ್ತಿದ್ದ ಆಲ್ ರೌಂಡರ್ ಹರ್ಷಲ್ ಪಟೇಲ್ ವಿಲಕ್ಷಣ ಶೈಲಿಯಲ್ಲಿ ಔಟಾದರು. ಟೀಮ್ ಇಂಡಿಯಾ ಪರ ಹರ್ಷಲ್ 11 ಎಸೆತಗಳಲ್ಲಿ 18 ರನ್ ಗಳಿಸಿ ಉತ್ತಮ ಕೊಡುಗೆ ನೀಡಿದರು. ಆದರೆ 19ನೇ ಓವರ್ನ ಮೂರನೇ ಎಸೆತದಲ್ಲಿ 30 ವರ್ಷ ವಯಸ್ಸಿನ ಲಾಕಿ ಫರ್ಗುಸನ್ ಎಸೆತದಲ್ಲಿ ಹಿಟ್ ವಿಕೆಟ್ನಲ್ಲಿ ಔಟಾದರು.
ಓವರ್ನ ಮೊದಲ ಚೆಂಡನ್ನು ಸಿಕ್ಸರ್ ಗೆ ಅಟ್ಟಿದ ನಂತರ ಪಟೇಲ್ ಆಫ್-ಸ್ಟಂಪ್ನ ಹೊರಗೆ ವೈಡ್ ಆಗಿದ್ದ ಎಸೆತಕ್ಕೆ ಕಟ್ ಶಾಟ್ ಆಡಲು ಪ್ರಯತ್ನಿಸಿದರು. ಆದರೆ ಅದನ್ನು ಸಂಪೂರ್ಣವಾಗಿ ತಪ್ಪಿಸಿಕೊಂಡರು. ತನ್ನ ಬ್ಯಾಟ್ನಿಂದ ಸ್ಟಂಪ್ಗೆ ಹೊಡೆದರು. ಈ ಪ್ರಕ್ರಿಯೆಯಲ್ಲಿ ಕೆ.ಎಲ್. ರಾಹುಲ್ ನಂತರ ಟ್ವೆಂಟಿ-20 ಪಂದ್ಯದ ಲ್ಲಿ ಹಿಟ್ ವಿಕೆಟ್ ಗೆ ಔಟಾದ ಎರಡನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.
#IndVsNZ A very strange dismissal as #HarshalPatel is out hit the wicket! 2nd Indian after #KLRahul to be out in this manner. Harshal was standing very far back in his crease. pic.twitter.com/jctmbfafDD
— SportsTalk (@rajeshworld) November 21, 2021