ದಿಲ್ಲಿ ಗಲಭೆ ಸಂದರ್ಭ ಮಸೀದಿಗೆ ಬೆಂಕಿ: ತಂದೆ-ಮಗನ ವಿರುದ್ಧ ಆರೋಪ ಪಟ್ಟಿ ರಚನೆ

ಹೊಸದಿಲ್ಲಿ, ನ. 22: ದಿಲ್ಲಿಯಲ್ಲಿ 2020 ಫೆಬ್ರವರಿಯಲ್ಲಿ ನಡೆದ ಗಲಭೆಯ ಸಂದರ್ಭ ಮಸೀದಿಗೆ ಬೆಂಕಿ ಹಚ್ಚಿದ, ಹಾನಿ ಮಾಡಿದ ಹಾಗೂ ದಾಂಧಲೆ ನಡೆಸಿದ ಆರೋಪದಲ್ಲಿ ದಿಲ್ಲಿ ನ್ಯಾಯಾಲಯ ಮಿತ್ಹಾನ್ ಸಿಂಗ್ ಹಾಗೂ ಆತನ ಪುತ್ರ ಜೋನಿ ಕುಮಾರ್ ವಿರುದ್ಧ ಕಿಚ್ಚಿಡುವಿಕೆ ಹಾಗೂ ಗಲಭೆ ಆರೋಪ ರೂಪಿಸಿದೆ.
2020 ಫೆಬ್ರವರಿ 25ರಂದು ದಿಲ್ಲಿಯ ಖಾಜುರಿ ಖಾಸ್ ಪ್ರದೇಶದಲ್ಲಿರುವ ಮಸೀದಿಗೆ ಹಾನಿ ಮಾಡಿದ ಹಾಗೂ ಜೈ ಶ್ರೀ ರಾಮ್ ಘೋಷಣೆ ಕೂಗಿದ ಗುಂಪಿನಲ್ಲಿ ಮಿತ್ಹಾನ್ ಸಿಂಗ್ ಹಾಗೂ ಜಾನಿ ಸಿಂಗ್ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿರೇಂದರ್ ಭಟ್ ಅವರು ಅಗತ್ಯದ ಕಲಂಗಳ ಅಡಿಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಆರೋಪ ರೂಪಿಸಿದರು. ಅಲ್ಲದೆ, ಆರೋಪ ಪಟ್ಟಿಯನ್ನು ಆರೋಪಿಗಳಿಗೆ ಅವರ ವಕೀಲರ ಉಪಸ್ಥಿತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ವಿವರಿಸಿದರು.
ಆರೋಪಿಗಳು ತಾವು ತಪ್ಪೆಸಗಿಲ್ಲ ಎಂದು ಮನವಿ ಮಾಡಿದರು ಹಾಗೂ ಪ್ರಕರಣದ ತನಿಖೆಗೆ ಆಗ್ರಹಿಸಿದರು. ಘಟನೆಯನ್ನು ವರದಿ ಮಾಡಲು ಹಾಗೂ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ವಿಳಂಬವಾಗಿರುವುದರಿಂದ ತಮ್ಮನ್ನು ಪ್ರಕರಣದಿಂದ ಖುಲಾಸೆಗೊಳಿಸುವಂತೆ ಆಗ್ರಹಿಸಿದ ಆರೋಪಿಗಳ ವಾದವನ್ನು ಅವರ ವಕೀಲ ಮುಂದಿಟ್ಟರು. ಆದರೆ, ನ್ಯಾಯಾಧೀಶರು ಅದನ್ನು ತಿರಸ್ಕರಿಸಿದ ನೆಂಬರ್ 20ರಂದು ಆದೇಶ ನೀಡಿದರು.





