ಬಜ್ಪೆ ಪೇರ ದರ್ಗಾ ವತಿಯಿಂದ ಶಾಫಿ ಸಅದಿಗೆ ಸನ್ಮಾನ

ಮಂಗಳೂರು, ನ. 22: ರಾಜ್ಯ ವಕ್ಫ್ ಬೋರ್ಡ್‌ನ ನೂತನ ಅಧ್ಯಕ್ಷ ಮೌಲಾನ ಶಾಫಿ ಸಅದಿ ಅವರನ್ನು ಬಜ್ಪೆ ಸಮೀಪದ ಪೇರ ಮುಹಿಯುದ್ದಿನ್ ಜುಮಾ ಮಸೀದಿ ಮತ್ತು ಪೇರ ದರ್ಗಾ ವಠಾರದಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಈ ಸಂದರ್ಭ ಮಸೀದಿಯ ಅದ್ಯಕ್ಷ ಟಿ.ಎಚ್. ಇಬ್ರಾಹಿಂ ಬ್ಯಾರಿ ಮತ್ತು ಹಾಜಿ ಕೆಐ ಬದ್ರುದ್ದೀನ್, ಜರಿ ಮಸೀದಿಯ ಉಪಾಧ್ಯಕ್ಷ ಎಂ.ಎಚ್ ಹನೀಫ್ ಮತ್ತು ಮಸೀದಿಯ ಪ್ರಧಾನ ಕಾರ್ಯದರ್ಶಿ ರಿಯಾಝ್, ಖತೀಬರಾದ ಇಬ್ರಾಹಿಂ ಅಶ್ರಫಿ, ಮಸ್ಜಿದ್ ರಹ್ಮಾನ್ ನ್ಯೂ ಸೈಟ್ ಇದರ ಅಧ್ಯಕ್ಷ ಮುಹಮ್ಮದ್ ಸ್ವಾಲಿ ,ಇಸ್ಮಾಯಿಲ್ ಇಂಜಿನಿಯರ್ ಕೊಳಂಬೆ, ಸಲೀಲ್ ಹಾಜಿ ,ಅಶ್ರಫ್ ಕಿನಾರ, ನಾಸೀರ್ ಲಕ್ಕಿಸ್ಟಾರ್, ಹಫೀಝ್ ಕೊಳಂಬೆ ಮತ್ತಿತರು ಉಪಸ್ಥಿತರಿದ್ದರು.
Next Story





