ವೇಟರ್ ಗಳ ಕೇಸರಿ ಉಡುಪು ಹಿಂದೆಗೆದುಕೊಳ್ಳದಿದ್ದರೆ ರಾಮಾಯಣ ರೈಲನ್ನು ತಡೆಯುವುದಾಗಿ ಸಂತರ ಎಚ್ಚರಿಕೆ

PHOTO COURTESY IRCTC
ಉಜ್ಜಯಿನಿ(ಮಧ್ಯಪ್ರದೇಶ),ನ.22: ರಾಮಾಯಣ ಎಕ್ಸ್ಪ್ರೆಸ್ ರೈಲಿನಲ್ಲಿ ವೇಟರ್ಗಳು ಕೇಸರಿ ಉಡುಪನ್ನು ಧರಿಸುತ್ತಿರುವುದನ್ನು ಆಕ್ಷೇಪಿಸಿರುವ ಉಜ್ಜಯಿನಿಯ ಸಂತರು ಇದು ಹಿಂದು ಧರ್ಮಕ್ಕೆ ಅವಮಾನವಾಗಿದೆ ಮತ್ತು ಈ ಉಡುಪು ಸಂಹಿತೆಯನ್ನು ಹಿಂದೆಗೆದುಕೊಳ್ಳದಿದ್ದರೆ ಡಿ.12ರಂದು ದಿಲ್ಲಿಯಲ್ಲಿ ರೈಲನ್ನು ತಡೆಯುವುದಾಗಿ ಬೆದರಿಕೆಯೊಡ್ಡಿದ್ದಾರೆ.
‘ರಾಮಾಯಣ ಎಕ್ಸ್ಪ್ರೆಸ್ನಲ್ಲಿ ತಿಂಡಿತಿನಿಸು ಮತು ಊಟ ಪೂರೈಸುವ ವೇಟರ್ಗಳು ಕೇಸರಿ ಉಡುಪನ್ನು ಧರಿಸುತ್ತಿರುವುದನ್ನು ಪ್ರತಿಭಟಿಸಿ ನಾವು ಎರಡು ದಿನಗಳ ಹಿಂದೆ ಕೇಂದ್ರ ರೈಲ್ವೆ ಸಚಿವರಿಗೆ ಪತ್ರವನ್ನು ಬರೆದಿದ್ದೇವೆ. ಸಾಧುಗಳಂತೆ ಕೇಸರಿ ಉಡುಪು,ರುಮಾಲು ಮತ್ತು ರುದ್ರಾಕ್ಷಿ ಮಾಲೆಗಳನ್ನು ಧರಿಸುವುದು ಹಿಂದು ಧರ್ಮ ಮತ್ತು ಸಂತರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಉಜ್ಜಯಿನಿ ಅಖಾಡಾ ಪರಿಷದ್ನ ಮಾಜಿ ಪ್ರ.ಕಾರ್ಯದರ್ಶಿ ಅವಧೇಶಪುರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ವೇಟರ್ಗಳ ಉಡುಪು ಸಂಹಿತೆಯನ್ನು ಹಿಂದೆಗೆದುಕೊಳ್ಳದಿದ್ದರೆ ದಿಲ್ಲಿಯ ಸಫ್ದರ್ಜಂಗ್ ರೈಲು ನಿಲ್ದಾಣದಲ್ಲಿ ಹಳಿಗಳ ಮೇಲೆ ಕುಳಿತು ರಾಮಾಯಣ ಎಕ್ಸ್ಪ್ರೆಸ್ ಅನ್ನು ತಡೆಯುತ್ತೇವೆ.ಹಿಂದು ಧರ್ಮದ ರಕ್ಷಣೆಗೆ ಇದು ಅಗತ್ಯವಾಗಿದೆ ಎಂದರು.