Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪತ್ನಿಗಾಗಿ ತಾಜ್‌ಮಹಲ್ ಹೋಲುವ ಮನೆ...

ಪತ್ನಿಗಾಗಿ ತಾಜ್‌ಮಹಲ್ ಹೋಲುವ ಮನೆ ಕಟ್ಟಿಸಿದ ಶಿಕ್ಷಣತಜ್ಞ !

ವಾರ್ತಾಭಾರತಿವಾರ್ತಾಭಾರತಿ23 Nov 2021 8:28 AM IST
share
ಪತ್ನಿಗಾಗಿ ತಾಜ್‌ಮಹಲ್ ಹೋಲುವ ಮನೆ ಕಟ್ಟಿಸಿದ ಶಿಕ್ಷಣತಜ್ಞ !

ಭೋಪಾಲ್: ಮಧ್ಯಪ್ರದೇಶದ ಪಟ್ಟಣದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿಗೆ ಉಡುಗೊರೆಯಾಗಿ ತಾಜ್‌ಮಹಲ್ ಕಟ್ಟಡವನ್ನೇ ಹೋಲುವ ಮನೆಯೊಂದನ್ನು ಕಟ್ಟಿಸಿದ್ದಾರೆ!

ಬುರ್ಹಾನ್‌ಪುರ ಮೂಲದ ಶಿಕ್ಷಣ ತಜ್ಞ, ಆಸ್ಪತ್ರೆ ಹಾಗೂ ಶಾಲೆಯ ಮಾಲಕ ಆನಂದ್ ಪ್ರಕಾಶ್ ಚೋಕ್ಸಿ ತಮ್ಮ ಶಾಲೆಯ ಸಮೀಪ ತಾಜ್‌ಮಹಲ್ ಕಟ್ಟಡವನ್ನೇ ಹೋಲುವ ಕಟ್ಟಡವನ್ನು ನಿರ್ಮಿಸಿ, ಪತ್ನಿ ಮಂಜೂಷಾ ಚೋಕ್ಸಿಗೆ ಉಡುಗೊರೆಯಾಗಿ ನೀಡಿದ್ದಾರೆ.

"ಈ ಮನೆ ಆಗ್ರಾದ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕ ಎನಿಸಿದ ತಾಜ್‌ಮಹಲ್‌ನ ಮೂರನೇ ಒಂದರಷ್ಟು ದೊಡ್ಡದಿದೆ. ಮೂರು ವರ್ಷದ ಹಿಂದೆ ನಾನು ಹಾಗೂ ಪತ್ನಿ ತಾಜ್‌ಮಹಲ್‌ಗೆ ಭೇಟಿ ನೀಡಿದ್ದೇ ಈ ಪ್ರತಿಕೃತಿ ನಿರ್ಮಾಣಕ್ಕೆ ಸ್ಫೂರ್ತಿ. ಇದರ ವಾಸ್ತುಶಿಲ್ಪವನ್ನು ನಾವು ಅಧ್ಯಯನ ಮಾಡಿ, ವಿವರಗಳನ್ನು ಗಮನಿಸುವಂತೆ ಎಂಜಿನಿಯರ್‌ಗಳಿಗೆ ಸೂಚಿಸಿದೆವು. ಬುರ್ಹಾನ್‌ಪುರ ಮತ್ತು ಹೊರಗಿನ ಕುಶಲಕರ್ಮಿಗಳು ಸುಮಾರು ಎರಡೂವರೆ ವರ್ಷ ಕೆಲಸ ಮಾಡಿ ತಾಜ್‌ಮಹಲ್ ಕಟ್ಟಡವನ್ನೇ ಹೋಲುವ ಮನೆ ನಿರ್ಮಾಣವನ್ನು ಪೂರ್ಣಗೊಳಿಸಿದರು. ಇದೀಗ ಈ ಮನೆ, ಆಗ್ರಾಗೆ ಪ್ರಯಾಣ ಬೆಳೆಸಲು ಶಕ್ತರಾಗದ ಪ್ರವಾಸಿಗಳಿಗೆ ಮತ್ತು ವಿವಾಹಪೂರ್ವ ಚಿತ್ರೀಕರಣಕ್ಕೆ ತಾಣಗಳನ್ನು ಹುಡುಕುವ ಯುವ ಜೋಡಿಗಳಿಗೆ ಇದು ಪ್ರಮುಖ ಆಕರ್ಷಣೆಯಾಗಲಿದೆ" ಎಂದು ಚೋಕ್ಸಿ ಹೇಳಿದರು.

55-60 ಅಡಿ ಎತ್ತರದ (ಮೂಲವಾಗಿ 80 ಅಡಿ ಎತ್ತರದ ಕಟ್ಟಡ ನಿರ್ಮಿಸುವ ಉದ್ದೇಶವಿತ್ತು. ಆದರೆ ಸ್ಥಳೀಯ ಪ್ರಾಧಿಕಾರ ಅನುಮತಿ ನೀಡಲಿಲ್ಲ) ಈ ಕಟ್ಟಡ ದೊಡ್ಡದಾದ ಹಜಾರ, ನಾಲ್ಕು ಶಯನಗೃಹಗಳು, ಒಂದು ವಿಶಾಲವಾದ ಪಾಕಶಾಲೆ ಮತ್ತು ಧ್ಯಾನಕ್ಕಾಗಿ ಒಂದು ಹಜಾರವನ್ನು ಹೊಂದಿದೆ.

ತಾಜ್‌ಮಹಲ್ ಹೋಲುವ ಮನೆಯ ಮಾದರಿಯನ್ನು ನಿರ್ಮಿಸಿದ ಎಂಜಿನಿಯರ್ ಪ್ರವೀಣ್ ಚೋಕ್ಸಿ ಹೇಳುವಂತೆ, "ನಮ್ಮ ತಂಡಕ್ಕೆ ತಾಜ್‌ಮಹಲ್‌ನ ವಿವರವಾದ ವಿನ್ಯಾಸವನ್ನು ಅಧ್ಯಯನ ಮಾಡಲು ಸುಮಾರು ಒಂದು ತಿಂಗಳು ತಗುಲಿತು. ಬಳಿಕ ನಾಲ್ಕು ವಾರಗಳ ಪ್ಲಾನ್ ಸಿದ್ಧಪಡಿಸಲಾಯಿತು. ಅನುಭವಿ ಗುತ್ತಿಗೆದಾರ ಮುಸ್ತಾಕ್ ಭಾಯ್ ಅವರ ಮಾರ್ಗದರ್ಶನದಲ್ಲಿ ಬುರ್ಹಾನ್‌ಪುರ ಮತ್ತು ಹೊರಗಿನ ಕುಶಲಕರ್ಮಿಗಳು ಈ ಕನಸಿನ ಯೋಜನೆಯನ್ನು ಎರಡೂವರೆ ವರ್ಷಗಳಲ್ಲಿ ಮುಗಿಸಿದರು"

ಇಂಧೋರ್ ಮತ್ತು ಪಶ್ಚಿಮ ಬಂಗಾಳದಿಂದ ಆಗಮಿಸಿದ ಕುಶಲಕರ್ಮಿಗಳು ಸಿಮೆಂಟಿನ ಕೆತ್ತನೆಗಳನ್ನು ಮಾಡಿದ್ದರೆ ಮಕ್ರಾನಾದಿಂದ ತಂದ ಅಮೃತಶಿಲೆಯ ಆಕರ್ಷಕ ಕೆತ್ತನೆಗಳನ್ನು ರಾಜಸ್ಥಾನದ ಕುಶಲಕರ್ಮಿಗಳು ಮಾಡಿದ್ದಾರೆ. ಆಗ್ರಾದ ಕುಶಲಕರ್ಮಿಗಳು ನೆಲಹಾಸು ಅಳವಡಿಸಿದ್ದಾರೆ. ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸವನ್ನು ಮುಂಬೈ ಹಾಗೂ ಸೂರತ್‌ನಿಂದ ಬಂದ ತಂಡಗಳು ನಿರ್ವಹಿಸಿವೆ ಎಂದು ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X