ಮಂಗಳೂರು; ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ: ವಕೀಲ ಯದುನಂದನ್ ಬಂಧನ

ಯದುನಂದನ್
ಮಂಗಳೂರು: ನಗರದ ಟಿವಿ ಚಾನೆಲ್ ಒಂದರ ವರದಿಗಾರನ ಮೇಲೆ ಸೋಮವಾರ ಸಂಜೆಯ ವೇಳೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ವಕೀಲ ಯದುನಂದನ್ ಎಂದು ಗುರುತಿಸಲಾಗಿದೆ.
ಪತ್ರಕರ್ತನ ಮೇಲೆ ಹಲ್ಲೆಗೆ ಕಾರಣವಿನ್ನೂ ಸ್ಪಷ್ಟ ವಾಗಿಲ್ಲ. ತಲೆಗೆ ತೀವ್ರವಾಗಿ ಹಲ್ಲೆಗೊಳಗಾದ ಪತ್ರಕರ್ತ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಉರ್ವಾ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದ್ದು, ಠಾಣೆಯಲ್ಲಿ ಪ್ರತಿದೂರು ಕೂಡ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
Next Story





