ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಚಿಂತನೆ

ಬೆಂಗಳೂರು, ನ.23: ನಗರದಲ್ಲಿ ಮಳೆ ಅವಾಂತರಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ನಗರದಲ್ಲಿ ಒತ್ತುವರಿಯಾಗಿರುವ ರಾಜಕಾಲುವೆಯನ್ನು ತೆರವು ಮಾಡಲು ಬಿಬಿಎಂಪಿ ತೀರ್ಮಾನ ಮಾಡಿದೆ. ಈಗಾಗಲೇ ಬಿಬಿಎಂಪಿಯಿಂದ ಒತ್ತುವರಿ ಮಾಡಿರುವ ಕಟ್ಟಡಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಆ ಪೈಕಿ ಒಟ್ಟು 714 ಕಟ್ಟಡಗಳ ತೆರವಿಗೆ ತೀರ್ಮಾನ ಮಾಡಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಒತ್ತುವರಿ ತೆರುವಿಗೆ ತೀರ್ಮಾನ ಮಾಡಿದ್ದು, ಒತ್ತುವರಿ ತೆರವಿಗಾಗಿ ವಲಯವಾರು ಪಟ್ಟಿ ಸಿದ್ಧಪಡಿಸಿದೆ. ಬಿಬಿಎಂಪಿ ಪೂರ್ವ ವಲಯದಲ್ಲಿ 110 ಕಟ್ಟಡಗಳು, ಪಶ್ಚಿಮ ವಲಯ 59 ಕಟ್ಟಡಗಳು, ದಕ್ಷಿಣ ವಲಯ 20 ಕಟ್ಟಡಗಳಿವೆ.
ಇನ್ನು ಕೋರಮಂಗಲ ವ್ಯಾಲಿ ವಲಯದಲ್ಲಿ 3 ಕಟ್ಟಡ, ಯಲಹಂಕ ವಲಯ 103 ಕಟ್ಟಡ, ಮಹಾದೇವಪುರ ವಲಯ 184 ಕಟ್ಟಡಗಳಿದ್ದರೆ, ಬೊಮ್ಮನಹಳ್ಳಿ ವಲಯ 92 ಕಟ್ಟಡಗಳು, ಆರ್. ಆರ್. ನಗರ ವಲಯ 9 ಕಟ್ಟಡಗಳು, ದಾಸರಹಳ್ಳಿ ವಲಯ 134 ಕಟ್ಟಡಗಳು ಪಟ್ಟಿಯಲ್ಲಿವೆ.
Next Story





