ಬೋಜರಾಜ್ ಎಂಬಿಬಿಎಸ್ ಚಿತ್ರದ ಆಡಿಯೋ ಬಿಡುಗಡೆ
![ಬೋಜರಾಜ್ ಎಂಬಿಬಿಎಸ್ ಚಿತ್ರದ ಆಡಿಯೋ ಬಿಡುಗಡೆ ಬೋಜರಾಜ್ ಎಂಬಿಬಿಎಸ್ ಚಿತ್ರದ ಆಡಿಯೋ ಬಿಡುಗಡೆ](https://www.varthabharati.in/sites/default/files/images/articles/2021/11/23/314951-1637689467.jpg)
ಮಂಗಳೂರು, ನ.23: ದರ್ಬಾರ್ ಸಿನೆಮಾಸ್ ಬ್ಯಾನರಿನಲ್ಲಿ ರಫೀಕ್ ದರ್ಬಾರ್ ನಿರ್ಮಿಸಿ, ಪರ್ವೇಝ್ ಬೆಳ್ಳಾರೆ, ಶರಣ್ರಾಜ್ ಕಾಸರಗೋಡು ಸಹ ನಿರ್ಮಾಣದ ಇಸ್ಮಾಯೀಲ್ ಮೂಡುಶೆಡ್ಡೆ ನಿರ್ದೇಶನದ ಹಾಸ್ಯ ಪ್ರಧಾನ ತುಳು ಚಿತ್ರ ಬೋಜರಾಜ್ ಎಂಬಿಬಿಎಸ್ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮವು ನಗರದ ಕೋಡಿಯಾಲ್ಬೈಲ್ ಭಗವತಿ ದೇವಸ್ಥಾನದ ಅಡಿಟೋರಿಯಂ ನಲ್ಲಿ ರವಿವಾರ ನಡೆಯಿತು.
ಹಿರಿಯ ಚಿತ್ರ ನಿರ್ಮಾಪಕ ಡಾ.ಸಂಜೀವ ದಂಡಕೇರಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ.ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು, ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಎಸ್ .ಗಣೇಶ್ ರಾವ್ ಆಡಿಯೋ ಬಿಡುಗಡೆಗೊಳಿಸಿದರು. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಬ್ಯಾರಿ ಅಧ್ಯಯನ ಪೀಠದ ಸಂಚಾಲಕ ಡಾ. ಅಬೂಬಕ್ಕರ್ ಸಿದ್ದೀಕ್, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್, ಡಾ.ಸತೀಶ್ ಕಲ್ಲಿಮಾರ್, ಡಾ.ದೀಪ್ತಿ, ಬೋಜರಾಜ್ ವಾಮಂಜೂರು, ಸುದೇಶ್ ಕುಮಾರ್, ಶ್ರೀಪತಿ ಭಟ್, ಭಾಸ್ಕರ್ ದೇವಸ್ಯ ಉಪಸ್ಥಿತರಿದ್ದರು.