ವಾಯು ಮಾಲಿನ್ಯದ ಕಾರಣ ಮುಚ್ಚಿರುವ ದಿಲ್ಲಿಯ ಶಾಲಾ- ಕಾಲೇಜುಗಳು ಸೋಮವಾರ ಪುನರಾರಂಭ

ಹೊಸದಿಲ್ಲಿ: ನಗರದಲ್ಲಿ ವಾಯು ಗುಣಮಟ್ಟದ ಬಿಕ್ಕಟ್ಟಿನ ಮಧ್ಯೆ ದಿಲ್ಲಿಯ ಶಾಲಾ-ಕಾಲೇಜುಗಳು 10 ದಿನಗಳ ಹಿಂದೆ ಮುಚ್ಚಲ್ಪಟ್ಟಿದ್ದವು . ಇದೀಗ ಶಾಲಾ-ಕಾಲೇಜುಗಳು ಸೋಮವಾರ ಮತ್ತೆ ತೆರೆಯುತ್ತವೆ.
ನಗರದ ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ ಮತ್ತೊಮ್ಮೆ ತೀಕ್ಷ್ಣವಾದ ಟೀಕೆ ಮಾಡಿದ ಕೆಲವೇ ಗಂಟೆಗಳ ನಂತರ ಅರವಿಂದ ಕೇಜ್ರಿವಾಲ್ ಸರಕಾರದಿಂದ ಘೋಷಣೆ ಬಂದಿದೆ. ಆದರೆ ‘ಪರಿಸ್ಥಿತಿ ಸುಧಾರಿಸಿದರೆ ಕೆಲವು ನಿಷೇಧಗಳನ್ನು ಹಿಂಪಡೆಯಿರಿ’ ಎಂದೂ ನ್ಯಾಯಾಲಯ ಹೇಳಿದೆ.
"ದಿಲ್ಲಿಯಲ್ಲಿ ಈಗ ಗಾಳಿಯ ಗುಣಮಟ್ಟ ಸುಧಾರಿಸುತ್ತಿದೆ. ಶಾಲೆಗಳು, ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳು ಸೋಮವಾರದಿಂದ ಮತ್ತೆ ತೆರೆಯಲ್ಪಡುತ್ತವೆ" ಎಂದು ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ಇಂದು ಮಧ್ಯಾಹ್ನ ಸುದ್ದಿಗಾರರಿಗೆ ತಿಳಿಸಿದರು.
ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಸ್ವಲ್ಪಮಟ್ಟಿಗೆ ಸುಧಾರಿಸಿದ್ದರೂ ಅದು ಇನ್ನೂ "ಅತ್ಯಂತ ಕಳಪೆ" ವಿಭಾಗದಲ್ಲಿದೆ. ಅಕ್ಕಪಕ್ಕದ ನಗರಗಳಲ್ಲೂ ವಿಷಕಾರಿ ಗಾಳಿ ಬೀಸುತ್ತಿದೆ.
Next Story