ಉಡುಪಿ: ಕನ್ನಡ ರಾಜೋತ್ಸವ ಕವಿಗೋಷ್ಟಿ -ಸನ್ಮಾನ

ಉಡುಪಿ, ನ.24: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಡುಪಿ ಜಿಲ್ಲಾ ಹಾಗೂ ತಾಲೂಕು ಘಟಕ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಸಹಯೋಗದಲ್ಲಿ ಕನ್ನಡ ರಾಜೋತ್ಸವ ಕವಿಗೋಷ್ಟಿ ಕಾರ್ಯಕ್ರಮವು ನ.21ರಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್‌ನಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶೋಭಾ ಹರಿಪ್ರಸಾದ್ ಸೌದಿ ಅರೇಬಿಯಾ ಇವರನ್ನು ಸಮ್ಮಾನಿಸಲಾಯಿತು. ಮಲಬಾರ್ ಸಂಸ್ಥೆಯ ಹಫೀಝ್ ರಹಿಮಾನ್ ಅಡ್ಯಾರು, ಜೆಸಿಐ ವಲಯ ತರಬೇತಿದಾರ ಡಾ.ಶಿವಪ್ರಸಾದ ಕೆ., ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಸ್ತುವಾರಿ ರಾಮಕೃಷ್ಣ ಶಿರೂರ್, ಸಾಹಿತಿ ಮುರಳೀಧರ ಉಪಾಧ್ಯ ಹಿರಿಯಡ್ಕ, ಕವಿಗಳಾದ ಜನಾರ್ಧನ್ ಅಡಿಗ, ಅನಿತಾ ಹೊಳ್ಳ, ಉಮೇಶ ಆಚಾರ್ಯ, ನಾಗರತ್ನ, ನಾಗರಾಜ, ಸುಮಿತ್ರಾ ಐತಾಳ್, ಸುಮನ ಹೇರಳೆ, ಪುಷ್ಪ ಪ್ರಸಾದ, ಸರಸ್ವತಿ, ಮಂಜುನಾಥ, ಶಾಂಭವಿ ಕಾ.ಶ್ರೀ., ಪ್ರಸನ್ನಾ ಪಿ.ಭಟ್, ವಿಜಯಲಕ್ಷ್ಮಿ, ಭಾವನ ಕೆರೆಮಠ, ಮಲ್ಲಿಕಾ ಎಚ್.ಶೆಟ್ಟಿ, ದೀಪಿಕಾ, ಸೋನಾಲಿ ಎಸ್., ನಾಗೇಶ್, ಚಂದ್ರು, ಸೌದಾಮಿನಿ ರಾವ್, ಶರತ್ ಶೆಟ್ಟಿ,ಪ್ರಜ್ಞಾ ದೇವಾಡಿಗ ಉಪಸ್ಥಿತರಿದ್ದರು.
ಅಮೃತಾ ಸಂದೀಪ್ ಸ್ವಾಗತಿಸಿದರು. ವಾಸಂತಿ ಅಂಬಲಪಾಡಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸುಮಾಕಿರಣ್ ಕಾರ್ಯಕ್ರಮ ನಿರೂಪಿಸಿದರು. ಅನಿತಾ ಸಿಕ್ವೀರಾ ವಂದಿಸಿದರು.





