ಎಸ್‌ವೈಎಸ್ ದ.ಕ. ಜಿಲ್ಲಾ ಪ್ರತಿನಿಧಿ ಸಂಗಮ
ಮಂಗಳೂರು, ನ.24: ಎಸ್‌ವೈಎಸ್ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ನಾಟೆಕಲ್ ಸಮೀಪದ ಮಂಗಳನಗರದ ಜಾಮಿಯಾ ಮಸ್ಜಿದುನ್ನೂರ್‌ನಲ್ಲಿ ಮಜ್ಲಿಸುನ್ನೂರು ಪ್ರತಿನಿಧಿ ಸಂಗಮವು ಬುಧವಾರ ನಡೆಯಿತು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಬಿಕೆ ಅಬ್ದುಲ್ ಖಾದರ್ ಅಲ್‌ಖಾಸಿಮಿ ಬಂಬ್ರಾಣ ಕಾರ್ಯಕ್ರಮ ಉದ್ಘಾಟಿಸಿದರು.ಮೌಲಾನ ಯುಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎಸ್‌ವೈಎಸ್ ಕೇಂದ್ರ ಸಮಿತಿಯ ನಾಯಕರಾದ ಹಂಝ ರಹ್ಮಾನಿ ಕೊಂಡಿಪ್ಪರಂಬು ಮತ್ತು ಎಂಪಿ ಉಸ್ತಾದ್ ಕೊಡುಂಗಲ್ಲೂರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು.
ಪ್ರಧಾನ ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಪಟ್ಟೋರಿ ಸ್ವಾಗತಿಸಿದರು. ಮುಸ್ತಫಾ ಫೈಝಿ ಕಿನ್ಯ ವಂದಿಸಿದರು.
Next Story





