ಸಂಶಯದ ಮೇಲೆ ಅಪರಿಚಿತ ವ್ಯಕ್ತಿಯ ಬಂಧನ
ಮಂಗಳೂರು, ನ.234: ನಗರದ ಬೆಂದೂರ್‌ವೆಲ್‌ನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಕದ್ರಿ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಾರಿ ಕರೆ ತಾಲೂಕಿನ ಕುಮಾರ್ (45) ಬಂಧಿತ ಆರೋಪಿಯಾಗಿದ್ದಾನೆ
ಪೊಲೀಸ್ ಇನ್‌ಸ್ಪೆಕ್ಟರ್ ಸವಿತ್ರ ತೇಜ ಸಿಬ್ಬಂದಿಯ ಜತೆ ಮಂಗಳವಾರ ತಡರಾತ್ರಿ 2:45ರ ವೇಳೆಗೆ ಗಸ್ತು ತಿರುಗುತ್ತಿದ್ದಾಗ ಬೆಂದೂರ್‌ವೆಲ್‌ನ ಮೂರನೇ ಅಡ್ಡ ರಸ್ತೆಯಲ್ಲಿ ತನ್ನ ಇರುವಿಕೆಯನ್ನು ಮರೆ ಮಾಚಲು ಯತ್ನಿಸುತ್ತಿರುವುದನ್ನು ಕಂಡರು. ತಕ್ಷಣ ಹತ್ತಿರ ಹೋದಾಗ ಆರೋಪಿಯು ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ಸಂಶಯಾಸ್ದದ ರೀತಿಯಲ್ಲಿ ವರ್ತಿಸಿದ್ದು, ಬಳಿಕ ಪೊಲೀಸರಲ್ಲಿ ತನ್ನ ಹೆಸರು, ಊರು ತಿಳಿಸಿದ್ದಾನೆ.
ಯಾವುದೋ ದುಷ್ಕೃತ್ಯ ನಡೆಸುವ ಉದ್ದೇಶದಿಂದ ಸಂಶಯ ಬಂದ ಕಾರಣ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





