ಫಾ.ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಂಘಟನೆ ಉದ್ಘಾಟನೆ
ಮಂಗಳೂರು, ನ.24: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಉದ್ಘಾಟನೆ ಇಂದು ನಡೆಯಿತು.
ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ನಿರ್ದೇಶಕ ರೆ.ಫಾ. ರಿಚ್ಚರ್ಡ್ ಅಲೋಶಿಯಸ್ ಕುವೆಲ್ಲೋ, ಮೆಡಿಕಲ್ ಕಾಲೇಜಿನ ಡೀನ್ ಡಾ. ಜಯಪ್ರಕಾಶ್ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಫಾದರ್ ಮುಲ್ಲರ್ ಹೋಮಿಯೋಪತಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ. ಫಾ. ರೋಶನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ ರೆಫಾ. ರೋಹನ್ ಡಯಾಸ್, ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿಸೋಜಾ ಉಪಸ್ಥಿತರಿದ್ದರು.
ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಮಾಧವರಾಂ ನೋಹ್ ಶರೊನ್ ನೂತನ ಅಧ್ಯಕ್ಷ ಜಿ.ವಿ. ಅನೀಶ್‌ಗೆ ಅಧ್ಯಕ್ಷೀಯ ಕರ್ತವ್ಯಗಳನ್ನು ಹಸ್ತಾಂತರಿಸಿದರು. ವಿದ್ಯಾರ್ಥಿ ಸಂಘಟನೆಯ ನೂತನ ಪ್ರಧಾನ ಕಾರ್ಯದರ್ಶಿ ರಮ್ಯಾ ಎನ್., ಮ್ಯಾಗಝಿನ್ ಕಾರ್ಯದರ್ಶಿ ಸಾಂತ ಮರಿಯಾ ಫೆರ್ನಾಂಡಿಸ್, ಕ್ರೀಡಾ ಕಾರ್ಯದರ್ಶಿ ವಿಶಾಲ್, ಸಾಂಸ್ಕೃತಿಕ ಕಾರ್ಯದರ್ಶಿ ಸುಲೇಮಾನ್ ಶಾ ತಮ್ಮ ಕರ್ತವ್ಯಗಳನ್ನು ವಹಿಸಿಕೊಂಡರು.
ವಿದ್ಯಾರ್ಥಿಗಳಾದ ದರ್ಶನ ಪದ್ಮನಾಭನ್ ಮತ್ತು ಆರ್ದ ಗಣೇಶ್ ಎಸ್. ಕಾರ್ಯಕ್ರಮ ನಿರೂಪಿಸಿದರು.







