ನೌಕಾ ಪಡೆಯ ರಹಸ್ಯ ಮಾಹಿತಿ ಸೋರಿಕೆ: ಇಬ್ಬರು ಕಮಾಂಡರ್ಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ನ. 24: ಐಎನ್ಎಸ್ ಸಿಂಧುರತ್ನಾ-ಎಂಆರ್ಎಲ್ಸಿ ಯೋಜನೆಗೆ ಸಂಬಂಧಿಸಿ ರಹಸ್ಯ ಮಾಹಿತಿ ಸೋರಿಕೆ ಮಾಡಿದ ಆರೋಪಕ್ಕೆ ಸಂಬಂಧಿಸಿ ನೌಕಾ ಪಡೆಯ ಇಬ್ಬರು ಕಮಾಂಡರ್ಗಳಾದ ಜಗದೀಶ್ ಹಾಗೂ ಅಭಿಷೇಕ್ ಶಾ ವಿರುದ್ಧ ಸಿಬಿಐ ಆರೋಪ ಪಟ್ಟಿ ದಾಖಲಿಸಿದೆ. ಐಎನ್ಎಸ್ ಸಿಂಧುರತ್ನಾ-ಎಂಆರ್ಎಲ್ಸಿಗೆ ಸಂಬಂಧಿಸಿದ ಮುಂಗಡ ಪಾವತಿ ಕುರಿತಂತೆ ಮಾಹಿತಿ ಸೋರಿಕೆ ಮಾಡಿದ ಆರೋಪದಲ್ಲಿ ಕಮಾಂಡರ್ ಅಜಿತ್ ಪಾಂಡೆ ಹಾಗೂ ನೌಕಾ ಪಡೆಯ ನಿವೃತ್ತ ಅಧಿಕಾರಿ ಕೊಮೊಡೋರ್ ರಣದೀಪ್ ಸಿಂಗ್ ಅವರ ಹೆಸರನ್ನು ಕೂಡ ಸಿಬಿಐ ಹೊಸ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ 6 ಮಂದಿಯ ವಿರುದ್ಧ ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಸೆಪ್ಟಂಬರ್ 21ರಂದು ಬಂಧಿತರಾಗಿರುವ ನೌಕಾ ಪಡೆಯ ಅಧಿಕಾರಿ ಜಗದೀಶ್ ಹಾಗೂ ಕಮಾಂಡರ್ ಅಭಿಶೇಕ್ ಶಾ ವಿರುದ್ದ ತನಿಖೆ ಮುಂದುವರಿದಿದೆ. ಕಮಾಂಡರ್ ಜಗದೀಶ್ ಹಾಗೂ ಕಮಾಂಡರ್ ಶಾ ವಿರುದ್ಧ ಸಿಬಿಐ ನವೆಂಬರ್ 20ರಂದು ಆರೋಪ ಪಟ್ಟಿ ಸಲ್ಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story