ಕಾಂಗ್ರೆಸ್ ತೊರೆಯುವ ಮೊದಲು ಪ್ರಶಾಂತ್ ಕಿಶೋರ್ ಭೇಟಿ ಮಾಡಿದ್ದ ಮಣಿಪುರದ ಮಾಜಿ ಸಿಎಂ ಮುಕುಲ್ ಸಂಗ್ಮಾ

ಪ್ರಶಾಂತ್ ಕಿಶೋರ್ (PTI)
ಗುವಾಹಟಿ: ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ತಾನು ಹಾಗೂ ರಾಜ್ಯದ 17 ಶಾಸಕರ ಪೈಕಿ 11 ಮಂದಿ ಕಾಂಗ್ರೆಸ್ ತೊರೆದಿದ್ದಕ್ಕೆ ಕಾರಣಗಳ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಒಂದು ಪರಿಣಾಮಕಾರಿ ವಿರೋಧ ಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಸಂಗ್ಮಾ ವಿಷಾದಿಸಿದರು.
ಸಂಗ್ಮಾ ಹಾಗೂ 11 ಶಾಸಕರು ತೃಣಮೂಲ ಕಾಂಗ್ರೆಸ್ ಗೆ ಸೇರುವುದಾಗಿ ಘೋಷಿಸಿದ್ದು, ಪಕ್ಷದ ಸಹೋದ್ಯೋಗಿ ವಿನ್ಸೆಂಟ್ ಪಾಲಾ ಅವರನ್ನು ಮೇಘಾಲಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡಿದ ಬಗ್ಗೆ ಅಸಮಾಧಾನಗೊಂಡ ತಿಂಗಳುಗಳ ನಂತರ ಈ ರಾಜಕೀಯ ಬೆಳವಣಿಗೆ ನಡೆದಿದೆ.
ಸಂಗ್ಮಾ ಅವರು ಇತ್ತೀಚೆಗೆ ಕೋಲ್ಕತ್ತಾಗೆ ಹೋಗಿದ್ದು, ಅಲ್ಲಿ ಅವರು ತೃಣಮೂಲದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು "ಸೌಜನ್ಯದ ಭೇಟಿ"ಗಾಗಿ ಭೇಟಿಯಾದರು.
2023 ರ ವಿಧಾನಸಭಾ ಚುನಾವಣೆಗೆ ತೃಣಮೂಲವನ್ನು ಸಿದ್ಧಪಡಿಸಲು ಕಿಶೋರ್ ಅವರ ಚುನಾವಣಾ ತಂತ್ರಗಾರಿಕೆ ತಂಡವು ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿದೆ.
Next Story