ಕೆಎಸ್ಸಾರ್ಟಿಸಿ ಬಸ್- ಬೈಕ್ ನಡುವೆ ಢಿಕ್ಕಿ: ಒಂದೇ ಕಟುಂಬದ ಮೂವರು ಸ್ಥಳದಲ್ಲೇ ಮೃತ್ಯು

ಚಾಮರಾಜನಗರ: ಭೀಕರ ರಸ್ತೆ ಅಪಘಾತವೊಂದರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಸಂಜೆ ಚಾಮರಾಜನಗರದ ಮರಿಯಾಲ ಬಳಿ ನಡೆದಿದೆ.
ಮೈಸೂರಿನಿಂದ ಚಾಮರಾಜನಗರಕ್ಕೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಹಾಗೂ ಚಾಮರಾಜನಗರದಿಂದ ಮರಿಯಾಲ ಕಡೆಗೆ ತೆರಳುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಹೊಡೆದಿದ್ದು, ಬೈಕಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಚಾಮರಾಜನಗರ ಪಟ್ಟಣದ ಚನ್ನೀಪುರಮೋಳೆ ಬಡಾವಣೆಯ ರಾಜಪ್ಪ , ಅವರ ಪತ್ನಿ ಮತ್ತು ಪುತ್ರ ಅಶೋಕ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Next Story





