ಸೋಮವಾರಪೇಟೆ: ಬಾಲಕಿಗೆ ಲೈಂಗಿಕ ದೌರ್ಜನ್ಯದ ಆರೋಪ; ಕಾಫಿ ಎಸ್ಟೇಟ್ ರೈಟರ್ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಸೋಮವಾರಪೇಟೆ, ನ.25: ಕಾಫಿ ಎಸ್ಟೇಟ್ನ ರೈಟರ್ ಅಸ್ಸಾಂ ಮೂಲದ ಕಾರ್ಮಿಕ ಕುಟುಂಬದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ತಾಲೂಕಿನ ಕುಂಬೂರು ಎಜೆ ಎಸ್ಟೇಟ್ನ ರೈಟರ್ ವಸಂತ್ ಎಂದು ಗುರುಸಿಸಲಾಗಿದೆ. ಕಾಫಿ ಎಸ್ಟೇಟ್ನ ನೌಕರ ಫೈಝುದ್ದೀನ್ ಎಂಬಾತ ‘ ತನ್ನ ತಂಗಿಯ ಅಪ್ರಾಪ್ತ ಮಗಳೊಂದಿಗೆ ರೈಟರ್ ವಸಂತ್ ಅಸಭ್ಯವಾಗಿ ವರ್ತಿಸಿದ್ದಾನೆ’ ಎಂದು ದೂರು ನೀಡಿದ್ದು, ಆ ಸಂಬಂಧ ವೀಡಿಯೊ ತುಣುಕುಗಳನ್ನು ಪೊಲೀಸರಿಗೆ ನೀಡಿದ್ದಾನೆ. ಈ ಸಂಬಂಧ ಸೋಮವಾರಪೇಟೆ ಪೊಲೀಸರು ವಸಂತನ ವಿರುದ್ಧ ಐಪಿಸಿ ಸೆಕ್ಷನ್ 354ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಆರೋಪಿ ವಸಂತ ಪ್ರತಿದೂರು ನೀಡಿದ್ದು, ಎಸ್ಟೇಟ್ ಕಾರ್ಮಿಕ ಫೈಝುದ್ದೀನ್ ಸಂಬಳ ಹೆಚ್ಚಳ ಮಾಡುವಂತೆ ಕೇಳಿದ್ದ. ಇದಕ್ಕೆ ಸಮ್ಮತಿಸದಿದ್ದ ಕಾರಣ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ’ ಎಂದು ನಗರದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ. ವಸಂತನ ದೂರು ದಾಖಲಿಸಿಕೊಂಡಿರುವ ಪೊಲೀಸರು, ಫೈಝುದ್ದೀನ್ ವಿರುದ್ಧ ಐಪಿಸಿ 307ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





