ನ.26ರಿಂದ ಕೋವಿಡ್ ಲಸಿಕಾ ಶಿಬಿರ
ಮಂಗಳೂರು, ನ.25: ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾದ್ಯಂತ ನ.26 ಹಾಗೂ 27ರಂದು ಬೃಹತ್ ಕೋವಿಡ್ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ.
ಈ ಬೃಹತ್ ಲಸಿಕಾ ಮೇಳವು ಜಿಲ್ಲೆಯ ಎಲ್ಲಾ ಉಪಕೇಂದ್ರಗಳು, ನಗರ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ.
ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಆಶ್ರಯದಲ್ಲಿ ಮಂಗಳೂರು ವಿವಿ ವ್ಯಾಪ್ತಿಗೆ ಒಳಪಡುವ ನಗರದ ಎಲ್ಲಾ ಕಾಲೇಜುಗಳ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಹಾಗೂ ಅದರ ಯೋಜನಾಧಿಕಾರಿಗಳ ಸಹಯೋಗದೊಂದಿಗೆ ಲಸಿಕಾ ಮಿತ್ರರು ಮನೆ ಮನೆಗೆ ಆಗಮಿಸಿ, ಲಸಿಕೆಯ ಅರಿವು ಮೂಡಿಸುವರು ಎಂದು ಪ್ರಕಟನೆ ತಿಳಿಸಿದೆ.
Next Story





