ಎಸಿಬಿ ದಾಳಿ: ಕೃಷಿ ಅಧಿಕಾರಿ ರುದ್ರೇಶಪ್ಪಗೆ ಡಿ.7ರವರೆಗೆ ನ್ಯಾಯಾಂಗ ಬಂಧನ

ಟಿ.ಎಸ್ ರುದ್ರೇಶಪ್ಪ
ಗದಗ, ನ.25: ಗದಗದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್ ರುದ್ರೇಶಪ್ಪರನ್ನು ಎಸಿಬಿ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಬುಧವಾರ ರುದ್ರೇಶಪ್ಪರ ಮನೆಮೇಲೆ ಎಸಿಬಿ ದಾಳಿ ನಡೆಸಿದಾಗ ಅಪಾರ ಪ್ರಮಾಣದ ಚಿನ್ನ,ಚಿನ್ನದ ಬಿಸ್ಕೆಟ್ಗಳು,ನಗದು ಪತ್ತೆಯಾಗಿತ್ತು.ಗುರುವಾರ ಬೆಳಗ್ಗೆ ಎಸ್ಬಿಐ ಶಾಖೆಯಲ್ಲಿನ ರುದ್ರೇಶಪ್ಪನವರ ಲಾಕರ್ನ್ನು ತೆರೆದು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಲಾಕರ್ನಲ್ಲಿ ಏನು ದೊರೆತಿಲ್ಲವಾದರೂ, ಹೆಚ್ಚಿನ ವಿಚಾರಣೆಗಾಗಿ ರುದ್ರೇಶಪ್ಪರನ್ನು ಬಂಧಿಸಲಾಗಿದೆ.
ಗುರುವಾರ ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಡಿಸೆಂಬರ್ 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





