ಮೊದಲ ಟೆಸ್ಟ್: ಭಾರತ 345 ರನ್ ಗೆ ಆಲೌಟ್
ಶ್ರೇಯಸ್ ಅಯ್ಯರ್ ಶತಕ, ರವೀಂದ್ರ ಜಡೇಜ ಅರ್ಧಶತಕ

Photo: BCCI
ಕಾನ್ಪುರ: ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಶತಕದ ನೆರವಿನಿಂದ ಭಾರತವು ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 111.1 ಓವರ್ ಗಳಲ್ಲಿ 345 ರನ್ ಗೆ ಆಲೌಟಾಗಿದೆ.
2ನೇ ದಿನವಾದ ಶುಕ್ರವಾರ ಭಾರತದ ಪರ ಶ್ರೇಯಸ್ ಅಯ್ಯರ್ ತನ್ನ ಮೊದಲ ಪಂದ್ಯದಲ್ಲೆ ಶತಕ(105, 171 ಎಸೆತ, 13 ಬೌಂಡರಿ, 2 ಸಿಕ್ಸರ್)ಸಿಡಿಸಿದರು. ಜಡೇಜ(50), ಆರ್.ಅಶ್ವಿನ್(38) ಒಂದಷ್ಟು ಹೋರಾಟ ನೀಡಿದರು.
ಕಿವೀಸ್ ಪರವಾಗಿ ಟಿಮ್ ಸೌಥಿ(5-69)ಐದು ವಿಕೆಟ್ ಗೊಂಚಲು ಪಡೆದರು. ಜಮೀಸನ್(3-91) ಹಾಗೂ ಅಜಾಝ್ ಪಟೇಲ್(2-90) ಐದು ವಿಕೆಟ್ ಗಳನ್ನು ಹಂಚಿಕೊಂಡರು.
Next Story