ಕೇಂದ್ರದ ದುರಹಂಕಾರಕ್ಕೆ ರೈತರ ಚಳವಳಿ ನೆನಪಿಸಿಕೊಳ್ಳಲಾಗುತ್ತದೆ: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳು ಶುಕ್ರವಾರ ಒಂದು ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಂದೋಲನವನ್ನು ರೈತರ ಅಚಲವಾದ 'ಸತ್ಯಾಗ್ರಹ', '700 ರೈತರ ಹುತಾತ್ಮತೆ' ಹಾಗೂ 'ನಿರ್ದಯ ಬಿಜೆಪಿ ಸರಕಾರದ ದುರಹಂಕಾರಕ್ಕಾಗಿ ನೆನಪಿಸಿಕೊಳ್ಳಲಾಗುತ್ತದೆ" ಎಂದು ಹೇಳಿದರು.
ಕಳೆದ ವರ್ಷ ನವೆಂಬರ್ 26 ರಿಂದ ದಿಲ್ಲಿಯ ವಿವಿಧ ಗಡಿಗಳಲ್ಲಿ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
"ರೈತರ ಚಳವಳಿಗೆ ಒಂದು ವರ್ಷ. ಈ ಚಳುವಳಿಯು ರೈತರ ಅಚಲ ಸತ್ಯಾಗ್ರಹ, 700 ರೈತರ ಹುತಾತ್ಮತೆ, ನಿರ್ದಯ ಬಿಜೆಪಿ ಸರಕಾರದ ದುರಹಂಕಾರ ಹಾಗೂ 'ಅನ್ನದಾತರ' ಮೇಲಿನ ದೌರ್ಜನ್ಯಕ್ಕೆ ಹೆಸರುವಾಸಿಯಾಗಲಿದೆ" ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ಆದರೆ ಭಾರತದಲ್ಲಿ ರೈತರು ಯಾವಾಗಲೂ ಶ್ಲಾಘಿಸಲ್ಪಡುತ್ತಾರೆ ಹಾಗೂ ಯಾವಾಗಲೂ ಇರುತ್ತಾರೆ. ರೈತರ ಹೋರಾಟದ ವಿಜಯವು ಇದಕ್ಕೆ ಸಾಕ್ಷಿಯಾಗಿದೆ" ಎಂದ ಅವರು 'ಜೈ ಕಿಸಾನ್' ಎಂದು ಹೇಳಿದ್ದಾರೆ.
किसान आंदोलन का एक साल
— Priyanka Gandhi Vadra (@priyankagandhi) November 26, 2021
किसानों के अडिग सत्याग्रह, 700 किसानों की शहादत और निर्मम भाजपा सरकार के अहंकार व अन्नदाताओं पर अत्याचार के लिए जाना जाएगा।
लेकिन भारत में किसान की जय-जयकार हमेशा थी, है और रहेगी।
किसानों के संघर्ष की जीत इसका प्रमाण है।
जय किसान। pic.twitter.com/KCWnLNog0B







