ಕಾಸರಗೋಡು : ಆರೋಪಿ ನಪಟ್ಟ ರಫೀಕ್ ಗಾಗಿ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್

ಕಾಸರಗೋಡು : ತಲೆಮರೆಸಿಕೊಂಡಿರುವ ಆರೋಪಿ ಪೈವಳಿಕೆ ಅಟ್ಟೆಗೋಳಿಯ ನಪಟ್ಟ ರಫೀಕ್ (32) ಗಾಗಿ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ.
ಈತ ಕಾಲಿಯಾ ರಫೀಕ್ ಕೊಲೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿಯಾಗಿರುವ ರೌಡಿ ಶೀಟರ್ ಯೂಸುಫ್ ಝಿಯಾ ಎಂಬಾತನ ಸಹಚರನಾಗಿದ್ದು, ಕಾಸರಗೋಡು ಪೊಲೀಸರ ಮನವಿಯಂತೆ ನಪಟ್ಟ ರಫೀಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ.
ರಫೀಕ್ ಕೊಲೆ, ಅಪಹರಣ, ದರೋಡೆ, ಲೂಟಿ ಸೇರಿದಂತೆ ಕೇರಳ, ಕರ್ನಾಟಕ ಮೊದಲಾದೆಡೆ ಹಲವಾರು ಪ್ರಕರಣಗಳ ಆರೋಪಿಯಾಗಿದ್ದು. ಪೈವಳಿಕೆ ಕಾಯರ್ ಕಟ್ಟೆಯ ಝಿಯಾನ ಸಹಚರನಾಗಿದ್ದು, ಝಿಯಾನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Next Story





