Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಬೆಂಗಳೂರು
  3. ಬೆಂಗಳೂರು: 'ಬ್ರಾಹ್ಮಣ್ಯ ಅಳಿಯಲಿ...

ಬೆಂಗಳೂರು: 'ಬ್ರಾಹ್ಮಣ್ಯ ಅಳಿಯಲಿ ಸಂವಿಧಾನ ಉಳಿಯಲಿ'; ಬೃಹತ್ ರ್‍ಯಾಲಿ-ಸಮಾವೇಶ

ಹಂಸಲೇಖ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯುವಂತೆ ಒತ್ತಾಯ

ವಾರ್ತಾಭಾರತಿವಾರ್ತಾಭಾರತಿ26 Nov 2021 6:31 PM IST
share
ಬೆಂಗಳೂರು: ಬ್ರಾಹ್ಮಣ್ಯ ಅಳಿಯಲಿ ಸಂವಿಧಾನ ಉಳಿಯಲಿ; ಬೃಹತ್ ರ್‍ಯಾಲಿ-ಸಮಾವೇಶ

ಬೆಂಗಳೂರು, ನ. 26: ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಬ್ರಾಹ್ಮಣ್ಯದ ಹಲ್ಲೆಯನ್ನು ಖಂಡಿಸಿ ಸಂಗೀತ ನಿರ್ದೇಶಕ ಹಂಸಲೇಖ `ಸತ್ಯದ ಮಾತುಗಳನ್ನು ಬೆಂಬಲಿಸಿ' ನಗರದಲ್ಲಿ `ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ' ನೇತೃತ್ವದಲ್ಲಿ ನಡೆದ ಬೃಹತ್ ರ್‍ಯಾಲಿ, ಸಮಾವೇಶವು ಹಂಸಲೇಖ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಕೂಡಲೇ ಹಿಂಪಡೆಯಬೇಕೆಂದು ಸಾಹಿತಿಗಳು ಹಾಗೂ ಸಂಘಟನೆಗಳ ಪ್ರಮುಖರು ಒಕ್ಕೂರಲಿನಿಂದ ಒತ್ತಾಯಿಸಿದರು.

ಶುಕ್ರವಾರ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದಿಂದ ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀಜ್ಞಾನಪ್ರಕಾಶ್ ಸ್ವಾಮೀಜಿ ತಮಟೆ ಬಡಿಯುವ ಮೂಲಕ ರ್ಯಾಲಿಗೆ ಚಾಲನೆ ನೀಡಿದರು. ರ್‍ಯಾಲಿಯು ಕೋಡೆಸ್ ವೃತ್ತ, ಆನಂದರಾವ್ ವೃತ್ತ, ಶೇಷಾದ್ರಿ ರಸ್ತೆ ಮಾರ್ಗವಾಗಿ ಸ್ವಾತಂತ್ರ್ಯ ಉದ್ಯಾನವನ ತಲುಪಿತು. ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಸಂಖ್ಯೆಯ ಕಾರ್ಯಕರ್ತರು, `ಬ್ರಾಹ್ಮಣ್ಯ ಅಳಿಯಲಿ ಸಂವಿಧಾನ ಉಳಿಯಲಿ, ಹೆದರಬೇಡಿ ಹಂಸಲೇಖ ನಿಮ್ಮೊಂದಿಗೆ ನಾವಿದ್ದೇವೆ. ಬಾಡೇ ನಮ್ ಗಾಡು' ಎಂಬ ಘೋಷಣೆ ಕೂಗಿ ಜಾತಿವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಆ ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಸಂವಿಧಾನದ ಪೀಠಿಕೆಗೆ ಪುಷ್ಪಾರ್ಚನೆ ಹಾಗೂ ಪೀಠಿಕೆ ಓದುವ ಮೂಲಕ ಆರಂಭಗೊಂಡ ಸಮಾವೇಶದಲ್ಲಿ ಉದ್ಘಾಟನಾ ಭಾಷಣ ಮಾಡಿದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, `ದನದ ಮಾಂಸ ತಿನ್ನದ ವ್ಯಕ್ತಿ ಬ್ರಾಹ್ಮಣನಾಗಿರಲು ಸಾಧ್ಯವೇ ಇಲ್ಲ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದಾರೆ. ಅವರ ಮೇಲೆಯೂ ಕೇಸು ದಾಖಲಿಸುತ್ತೀರಾ. ಹಂಸಲೇಖ ಅವರಿಗೆ ಕ್ಷಮೆ ಕೇಳಿದ ಬಳಿಕವೂ ಅವರನ್ನು ಅವಹೇಳನ ಮಾಡುವ ಬ್ರಾಹ್ಮಣ್ಯಶಾಹಿಗಳು ದಲಿತ ಸಮುದಾಯದ ಮಗುವೊಂದು ದೇವಸ್ಥಾನಕ್ಕೆ ಹೋದ ಕಾರಣಕ್ಕೆ ಆತನ ಪೋಷಕರಿಗೆ ದಂಡ ವಿಧಿಸಿದ್ದಾರೆ. ಇದಕ್ಕೆ ಯಾರು ಕ್ಷಮೆ ಕೇಳಬೇಕು' ಎಂದು ವಾಗ್ದಾಳಿ ನಡೆಸಿದರು.

ನಿನ್ನೆಯಷ್ಟೇ ಹಂಸಲೇಖ ಕಾನೂನು, ಸಂವಿಧಾನಕ್ಕೆ ಗೌರವ ಕೊಟ್ಟು ಪೊಲೀಸ್ ಠಾಣೆಗೆ ತೆರಳಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅವರು ಕಣ್ಣೀರು ಹಾಕಿದರು ಎಂದು ಕೆಲ ಕುಹಕಿಗಳು ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಅವರು ರಾಜನಂತೆ ಠಾಣೆಗೆ ಹೋಗಿಬಂದಿದ್ದಾರೆ. ಕೂಡಲೇ ಹಂಸಲೇಖ ವಿರುದ್ಧದ ದೂರು ಹಿಂಪಡೆಯದಿದ್ದರೆ ಪ್ರತಿದೂರು ದಾಖಲಿಸಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ದೇಶದಲ್ಲಿ ಅಸ್ಪøಶ್ಯತೆ, ಜಾತೀಯತೆ ಆಚರಣೆ ಮಾಡುತ್ತಿರುವ ಬ್ರಾಹ್ಮಣ್ಯಶಾಹಿಗಳ ವಿರುದ್ಧ ರಾಷ್ಟ್ರದ್ರೋಹದ ಮೊಕದ್ದಮೆ ಮೊದಲು ದಾಖಲಿಸಬೇಕು. ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಹಂಸಲೇಖರ ಸತ್ಯದ ಮಾತುಗಳನ್ನು ತಿರುಚಿದ ಕೆಲ ಕಪಟಿಗಳು, ಕುಹಕಿಗಳು ಅವರ ವಿರುದ್ಧದ ಈ ಹೋರಾಟ ನಿಲ್ಲದು. ಸರಕಾರ ಕೂಡಲೇ ಪ್ರಕರಣ ವಾಪಸ್ ಪಡೆಯಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.

ಮಾಂಸಾಹಾರಿಗಳೆಂದು ಹೇಳಿಕೊಳ್ಳೋಣ: `ಮಾಂಸಾಹಾರಿಗಳು ರಾಕ್ಷಸರು ಎಂದು ಅವಹೇಳನ ಮಾಡಲಾಗಿದೆ. ಹೌದು ನಾವು ರಾಕ್ಷಸರೇ. ರಾಕ್ಷಸ ಎಂದರೆ ರಕ್ಷಕ. ನನ್ನ ಆಹಾರ ನನ್ನ ಹಕ್ಕು. ಹೀಗಾಗಿ ಮಾಂಸಾಹಾರಿಗಳು ತಾನು ಮಾಂಸಾಹಾರಿಗಳೆಂದು ಹೇಳಿಕೊಳ್ಳಲು ಹಿಂಜರಿಕೆ ಬೇಡ' ಎಂದು ಹಿರಿಯ ಸಾಹಿತಿ ಎಲ್.ಎನ್.ಮುಕುಂದರಾಜು ಕರೆ ನೀಡಿದರು.

`ಪರಮಾತ್ಮನ ಹೆಸರೇಳಿ ಪರಮಾನ್ನವನ್ನು ಉಂಡವರ ವಿರುದ್ಧ ಶೂದ್ರ ಸಮುದಾಯ ತಮ್ಮ ಆಹಾರ ತಮ್ಮ ಹಕ್ಕು ಎಂಬ ಸ್ವಾಭಿಮಾನ ಜಾಗೃತಿಗೊಳಿಸಿಕೊಳ್ಳಬೇಕು. ದೇಶದಲ್ಲಿ ಬ್ರಾಹ್ಮಣ್ಯ ತೊಲಗುವ ವರೆಗೂ ಈ ಹೋರಾಟ ಎಂದಿಗೂ ನಿಲ್ಲದು. ನಮ್ಮನ್ನು ಹಂಗಿಸಿದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ' ಎಂದು ಮುಕುಂದರಾಜು ಎಚ್ಚರಿಕೆ ನೀಡಿದರು.

ಪುರೋಹಿತರ ಕೊಳಕು ಮನಸ್ಸು: ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಪುರೋಹಿತನೋರ್ವ ಚಪ್ಪಲಿ ತೋರಿಸುವ ಮೂಲಕ ತನ್ನ ನೀಚ ಮತ್ತು ಕೊಳಕು ಮನಸ್ಥಿತಿಯನ್ನು ತೋರ್ಪಡಿಸಿದ್ದಾನೆ. ಇನ್ನೂ ಎಷ್ಟು ದಿನ ಬ್ರಾಹ್ಮಣ್ಯದ ಕೊಳಕಿನಲ್ಲಿ ಇರುತ್ತೀರಿ ಬಸವಣ್ಣನವರಂತೆ ಬ್ರಾಹ್ಮಣ್ಯ ತೊರೆದು ಮನುಷ್ಯರಾಗಿ ಬದುಕಿ' ಎಂದು ಎಚ್ಚರಿಕೆ ಕೊಟ್ಟರು.

ಹಂಸಲೇಖರ ಮಾತುಗಳು ತಪ್ಪಾಗಿ ಗ್ರಹಿಸಿದ ಕೆಲ ಅಜ್ಞಾನಿಗಳು ಮತ್ತು ಜಾತಿ ಶ್ರೇಷ್ಠತೆಯ ವ್ಯಸನಿಗಳು ಕುತಂತ್ರ ರೂಪಿಸುತ್ತಿದ್ದಾರೆ. ಆದರೆ, ಇದರ ವಿರುದ್ಧ ರಾಜ್ಯದಲ್ಲಿ ದಲಿತ ಮತ್ತು ಶೂದ್ರ ಸಮುದಾಯದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು, ಚಳವಳಿಗೆ ನಾಂದಿಯಾಗಿದೆ. ಕುಲಕಂಟಕ ಶಕ್ತಿಗಳ ವಿರುದ್ಧ, ಕೊಳಕು ಮನಸ್ಸಿನ ಜಾತಿವಾದಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

`ಹಂಸಲೇಖ ಅವರದ್ದು ದೊಡ್ಡತನ. ತಾವು ಯಾವುದೇ ತಪ್ಪು ಮಾಡದೆ ಕ್ಷಮೆಯಾಚನೆ ಮಾಡಿದ್ದಾರೆ. ಅವರು ಕ್ಷಮೆ ಕೇಳಿದ ಬಳಿಕವೂ ಅವರನ್ನು ಅವಹೇಳನ ಮಾಡುವುದು ಸಲ್ಲ. ಸಮಾಜದಲ್ಲಿನ ಅಸಮಾನತೆ ಪ್ರಶ್ನಿಸುವ ಮತ್ತು ತನಗೆ ಅನಿಸಿದನ್ನು ಹೇಳುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಸಂವಿಧಾನ ನೀಡಿದೆ. ನಾನೇನಾದರೂ ಹಂಸಲೇಖರ ಸ್ಥಾನದಲ್ಲಿ ಇದ್ದಿದ್ದರೆ ಕ್ಷಮೆ ಕೇಳಬೇಕೆನ್ನುವವರಿಗೆ `ಹೋಗು ಅದೇನು ಮಾಡ್ಕೋತ್ತಿಯೋ ಮಾಡಿಕೋ?' ಎಂದು ಸವಾಲು ಹಾಕುತ್ತಿದ್ದೆ. ದಲಿತ ಮತ್ತು ಶೂದ್ರ ಸಮುದಾಯ ಗುಡಿ-ಗುಂಡಾರಗಳಿಗೆ ಹೋಗುವುದನ್ನು ಬಿಟ್ಟು ಇನ್ನಾದರೂ ಜಾಗೃತರಾಗಬೇಕು' ಎಂದು ಮಾಜಿ ಸಚಿವೆ ಹಾಗೂ ಲೇಖಕಿ ಬಿ.ಟಿ.ಲಲಿತಾನಾಯಕ್ ಸಲಹೆ ನೀಡಿದರು.

ಸಮಾವೇಶದಲ್ಲಿ ಹಂಪಿ ಕನ್ನಡ ವಿವಿ ನಿವೃತ್ತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ, ನಟ ಚೇತನ್ ಅಹಿಂಸಾ, ಲೇಖಕರಾದ ಯೋಗೇಶ್ ಮಾಸ್ಟರ್, ಕೆ.ಶರೀಫಾ, ಕೇಶವರೆಡ್ಡಿ ಹಂದ್ರಾಳ, ಆರ್.ಜಿ.ಹಳ್ಳಿ ನಾಗರಾಜ್, ಪ್ರೊ.ವಡ್ಡಗೆರೆ ನಾಗರಾಜಯ್ಯ, ನಿವೃತ್ತ ಅಧಿಕಾರಿ ರುದ್ರಪ್ಪ ಹನಗವಾಡಿ, ವಕೀಲ ಸೂರ್ಯ ಮುಕುಂದರಾಜು, ಮುಖಂಡ ಮಂಜುನಾಥ ಅದ್ದೆ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಅನುರಣಿಸಿದ ಬಾಡೇ ನಮ್ಮ ಗಾಡು

ಮಾಂಸಾಹಾರಿಗಳು ರಾಕ್ಷಸರು ಎಂದು ಸಾಮಾಜಿಕ ಜಾಲತಾಣದಲ್ಲಿನ ಜಾತಿವಾದಿಗಳ ಅವಹೇಳನದ ವಿರುದ್ಧ `ನನ್ನ ಆಹಾರ ನನ್ನ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು, ಬಾಡೇ ನಮ್ ಗಾಡು, ಬೂದುಗುಂಬಳ ನಿಮ್ಮ ಗಾಡು' ಹಾಡನ್ನು ಸಮಾವೇಶದಲ್ಲಿ ಪಾಲ್ಗೊಂಡಿದ್ದ ಎಲ್ಲರೂ ಒಕ್ಕೂರಲಿನಿಂದ ಹಾಡಿದರು.

ಗಮನಸೆಳೆದ `ಜಗದ್ಗುರು ಮಟನ್ ರೆಸಿಪಿ ಸ್ಪಾಲ್'

ಸಮಾವೇಶದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯಗಳ ವಿಚಾರವಾದಿ ವಿದ್ಯಾರ್ಥಿಗಳ ಒಕ್ಕೂಟದಿಂದ ತೆರೆದಿದ್ದ ಜಗದ್ಗುರು ಮಟನ್ ರೆಸಿಪಿ ಸ್ಟಾಲ್, ಎಲ್ಲರ ಗಮನ ಸೆಳೆಯಿತು. ಸ್ಥಳದಲ್ಲೆ ತಯಾರಿಸಿಕೊಡುತ್ತಿದ್ದ ಕುರಿ ರಕ್ತದ ಫ್ರೈ, ಲಿವರ್ ಫ್ರೈ, ಕಾಲ್ ಸೂಪ್ ಮತ್ತು ಬಿಸಿ ಬಿಸಿ ಚಾಕ್ಣದ ಸವಿಯನ್ನು ಸಮಾವೇಶದಲ್ಲಿ ಸವಿದರು. 

`ನಾವೆಲ್ಲರೂ ದ್ರಾವಿಡರು, ನಾವು ಯಾರೂ ಮಧ್ಯ ಏಷ್ಯಾದಿಂದ ವಲಸೆ ಬಂದ ಆರ್ಯರಲ್ಲ. ನಾವೆಲ್ಲರೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಕ್ಕಳು. ಸಂವಿಧಾನ ಬದಲಾವಣೆಯ ಹುನ್ನಾರ ಬೆಂಗಳೂರಿನ ಬಸವನಗುಡಿಯಿಂದ ಆರಂಭವಾಗಿದೆ. ಸಂವಿಧಾನ ಉಳಿಸಲು ನಾವೆಲ್ಲರೂ ಪಣ ತೊಟ್ಟಿದ್ದೇವೆ. ಹಂಸಲೇಖ ಪರವಾಗಿರುವ ಈ ಹೋರಾಟ ಜಾತಿ ವ್ಯವಸ್ಥೆ ಮತ್ತು ಬ್ರಾಹ್ಮಣ್ಯದ ವಿರುದ್ಧ ನಮ್ಮ ಜಾಗೃತಿಯ ಚಳವಳಿಯಾಗಿದೆ'

-ಹ.ರ.ಮಹೇಶ್ ಅಧ್ಯಕ್ಷ, ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X